ಕುವೈಟಿನಲ್ಲಿ ರಮಝಾನ್, ಈದ್‍ನಲ್ಲಿ ಕರ್ಫ್ಯೂ ಮುಂದುವರಿಕೆ

0
941

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ: ಕುವೈಟಿನಲ್ಲಿ ಕೊರೋನಾ ಕರ್ಫ್ಯೂ ರಮಝಾನ್ ಮತ್ತು ಈದ್‍ನವರೆಗೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುವೈಟ್‍ನ ಎಲ್ಲ ಗವರ್ನರೇಟ್‍ಗಳಲ್ಲಿ ಕೊರೋನಾ ಹೆಚ್ಚಳವಾಗಿದ್ದು ಕರ್ಫ್ಯೂ ಸಾಮಾಜಿಕ ಅಂತರದ ಮೇಲೆ ನಿಗಾ ಇರಿಸದ್ದು ಕೊರೊನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕುವೈಟ್ ಉನ್ನತ ಮೂಲಗಳು ತಿಳಿಸಿವೆ.

ಆದ್ದರಿಂದ ರಮಝಾನ್ ತಿಂಗಳಲ್ಲಿ ಕರ್ಫ್ಯೂ ಮುಂದುವರಿಸಬೇಕಾಗುತ್ತದೆ. ಪರಿಸ್ಥಿತಿಯಲ್ಲಿ ಬದಲಾವಣೆ ಇಲ್ಲದಿದ್ದರೆ ಈದ್ ರಜಾ ಸಮಯದಲ್ಲಿ ಕರ್ಫ್ಯೂ ನಿಯಂತ್ರಣ ಮುಂದುವರಿಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾರ್ಚ್ ಏಳರಿಂದ ಸಂಜೆ ಐದು ಗಂಟೆಯಿಂದ ಬೆಳಗ್ಗಿನ ಐದು ಗಂಟೆಯವರೆಗೆ ಕುವೈಟಿನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ನಂತರ ಮಾಚ್ 23ರಂದ ಸಂಜೆ ಆರರಿಂದ ಬೆಳಗ್ಗೆ ಐದು ಗಂಟೆಯವರೆಗೆ ಕರ್ಫ್ಯೂ ಜಾರಿಗೊಳಿಸಲಾಯಿತು. ಸಾರ್ವಜನಿಕರಿಗೆ ಒಂದು ಗಂಟೆಯ ಸಡಿಲಿಕೆ ನೀಡಲಾಗಿತ್ತು.