ಪೌರತ್ವ ಮಸೂದೆಯ ವಿರುದ್ಧ ಅನಿವಾಸಿ ಭಾರತೀಯರಲ್ಲಿ ಆಕ್ರೋಶ: ಕುವೈಟಿನಲ್ಲಿ ಪ್ರತಿಭಟನೆ

0
1626

ಸನ್ಮಾರ್ಗ ವಾರ್ತೆ-

ಕುವೈಟ್ ಸಿಟಿ, ಡಿ. 12: ಭಾರತದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಅನಿವಾಸಿಗಳಲ್ಲಿಯೂ ಪ್ರತಿಭಟನೆ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಈ ವಾರ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಿದೆ. ಸಂಘಟನೆಗಳು ಜಂಟಿ ಸಮಿತಿಯನ್ನು ರೂಪೀಕರಿಸಿ ಪ್ರತಿಭಟನೆಗೆ ರೂಪು ಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ. ವಿಷಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುವಲ್ಲಿಯೂ ಅನಿವಾಸಿಗಳು ಮುಂಚೂಚೂಣಿಯಲ್ಲಿದ್ದಾರೆ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವುದು ಭಾರತದ ಅಸ್ತಿತ್ವವನ್ನೇ ನಾಶಪಡಿಸುವ ಕ್ರಮವಾಗಿದೆ ಎಂದು ಪ್ರತಿಭಟನಾ ಕುರಿತು ಸಂಘಟನೆಗಳು ತಿಳಿಸಿವೆ.

ಅಲ್ಪಸಂಖ್ಯಾತರು ಎದುರಿಸುತ್ತಿರುವ ಅಸ್ತಿತ್ವ ಸಮಸ್ಯೆ ಅನಿಶ್ಚಿತತೆಯಲ್ಲಿ ಅನಿವಾಸಿ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರಿಗೆ ಮಾತ್ರ ಭೇದಭಾವ ತೋರಿಸುವುದು ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ಸಂವಿಧಾನದ ಮೌಲ್ಯಗಳಿಗೆ ಸವಾಲಾಗಿದೆ ಎಂದು ಅನಿವಾಸಿ ಸಂಘಟನೆಗಳು ಹೇಳಿವೆ. ಒಂದು ಸಮುದಾಯವನ್ನು ಗುರಿ ಪಡಿಸುವುದು ದೇಶದಲ್ಲಿ ವಿಭಜನೆ ಸೃಷ್ಟಿಸುವುದು ಬಿಜೆಪಿ ಸರಕಾರದ ಯತ್ನವಾಗಿದೆ ಎಂದು ಕಲಾ ಕುವೈಟ್ ಇದರ ಪದಾಧಿಕಾರಿಗಳು ಹೇಳಿದ್ದಾರೆ.