ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಡಿ. 12: ಬಾಂಗ್ಲಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಭಾರತದ ಗೃಹ ಸಚಿವ
ಅಮಿತ್ ಶಾರ ಹೇಳಿಕೆಗೆ ಬಾಂಗ್ಲಾದೇಶ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ನಾವು ಧಾರ್ಮಿಕ ಅಲ್ಪಸಂಖ್ಯಾತರಿಗೆ ತಾರತಮ್ಯ ತೋರಿಸುವುದಿಲ್ಲ ಎಂದು ಬಾಂಗ್ಲಾದೇಶದ ವಿದೇಶ ಸಚಿವ ಡಾ.ಎ ಕೆ ಅಬ್ದುಲ್ ಮೂಮಿನ್ ಹೇಳಿದ್ದಾರೆ.
ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಶಾಂತಿಯಿಂದ ಎಲ್ಲರೂ ದೇಶದಲ್ಲಿ ವಾಸಿಸುತ್ತಿದ್ದಾರೆ. ಇದು ಅರ್ಥವಾಗಬೇಕಾದರೆ ಅಮಿತ್ ಶಾ ಕೆಲವು ದಿವಸ ಬಾಂಗ್ಲಾದೇಶದಲ್ಲಿ ವಾಸಿಸಬೇಕೆಂದು ವಿದೇಶ ಸಚಿವರು ಹೇಳಿದರು. ಪೌರತ್ವ ತಿದ್ದು ಪಡಿ ಮಸೂದೆ ಜಾತ್ಯತೀತ ದೇಶ ಭಾರತದ ವರ್ಚಸ್ಸನ್ನೇ ಇಲ್ಲದಾಗಿಸುವಂತಹದು. ಭಾರತದ ಹೊಸ ಕ್ರಮ ಉಭಯ ದೇಶಗ ಪರಸ್ಪರ ಸಂಬಂಧಕ್ಕೆ ಬಾಧಕವಾಗದು ಎಂದು ಸಚಿವ ಅಬ್ದುಲ್ ಮೂಮಿನ್ ಹೇಳಿದರು ಎಂದು ಎಎನ್ಐ ವರದಿ ಮಾಡಿದೆ.
ಅವರು ಮೂರು ದಿನಗಳ ಭಾರತ ಭೇಟಿಗೆ ಹೊಸದಿಲ್ಲಿಗೆ ಬರಲಿದ್ದಾರೆ. ಅದಕ್ಕಿಂತ ಮೊದಲು ಅವರು ಹೇಳಿಕೆ ನೀಡಿದ್ದಾರೆ. ಭಾರತ-ಫೆಸಿಫಿಕ್ ರೀಜನಲ್ ಚರ್ಚೆ ನಡೆಸುವುದಕ್ಕಾಗಿ ಮಾಮಿನ್ ಭಾರತಕ್ಕೆ ಬರುತ್ತಿದ್ದಾರೆ.












