ಕುವೈಟ್ ಮುಟ್ಲ ಹೌಸಿಂಗ್ ಪ್ರೋಜೆಕ್ಟ್; ನಾಲ್ವರ ಸಾವು, ಗಾಯಾಳುಗಳಲ್ಲಿ ಭಾರತೀಯರು -ವೀಡಿಯೊ

0
824

ಸನ್ಮಾರ್ಗ ವಾರ್ತೆ

ಕುವೈಟ್, ಫೆ. 13: ಕುವೈಟ್‍ನ ಮುಟ್ಲ ಹೌಸಿಂಗ್ ಯೋಜನೆಯಲ್ಲಿ ಮಣ್ಣು ಕುಸಿತವಾಗಿ ನಾಲ್ವರು ಮೃತಪಟ್ಟಿದ್ದು ಹನ್ನೊಂದು ಮಂದಿ ಮಣ್ಣಿನಡಿ ಕಾಣೆಯಾಗಿದ್ದಾರೆ. ಅಗ್ನಿಶಾಮಕ ದಳ, ರಕ್ಷಣಾ ತಂಡ ಸ್ಥಳದಲ್ಲಿ ಕಾಣೆಯಾದವರನ್ನು ಹುಡುಕುತ್ತಿವೆ. ಬುಧವಾರ ರಾತ್ರೆಯೂ ನಾಪತ್ತೆಯಾದವರ ಹುಡುಕಾಟ ಮುಂದುವರಿಯಿತು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂಬ ಸೂಚನೆಗಳಿವೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಮತ್ತು ಓರ್ವ ನೇಪಾಳದ ವ್ಯಕ್ತಿ ಸೇರಿದ್ದಾನೆಂದು ಮಾಧ್ಯಮಗಳು ವರದಿ ಮಾಡಿವೆ. ಮಣ್ಣಿನಡಿಯಿಂದ ಹೊರತೆಗೆದ ಮೂವರನ್ನು ಜಹ್ರ ಆಸ್ಪತ್ರೆಗೆ ಸೇರಿಸಲಾಗಿದೆ. ಶಕ್ತಿಶಾಲಿ ಮರಳುಗಾಳಿ ಬೀಸಿದ್ದರಿಂದ ಮಣ್ಣು ಕುಸಿತವಾಗಿದೆ. ಕಾರ್ಮಿಕರು ಓಡಿ ಪಾರಾಗಲು ಯತ್ನಿಸಿದರೂ ಕೆಲವರು ಹೊಂಡಕ್ಕೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಬುಧವಾರ ಸಂಜೆ ನಾಲ್ಕು ಗಂಟೆಯ ವೇಳೆ ಘಟನೆ ನಡೆಯಿತು. ಇಪ್ಪತ್ತು ಆಂಬುಲೆನ್ಸ್ ಗಳು ಸ್ಥಳಕ್ಕಾಗಮಿಸಿವೆ. ಎಲ್ಲ ರೀತಿಯ ಸಿದ್ಧತೆಗಳೊಂದಿಗೆ ಅಗ್ನಿಶಾಮಕ ತಂಡ ಕಾಣೆಯಾದವರ ಪತ್ತೆಗೆ ಶ್ರಮಿಸುತ್ತಿವೆ.

കുവൈത്തിലെ മുത്​ല ഭവന പദ്ധതിയിൽ മണ്ണിടിച്ചിൽ; നാലു​​ മരണം

കുവൈത്തിലെ മുത്​ല ഭവന പദ്ധതിയിൽ മണ്ണിടിച്ചിൽ; നാലു​​ മരണം, പരിക്കേറ്റവരിൽ ഇന്ത്യക്കാരും #MutlaSiteCollapse #KuwaitAlMutlaHousingProject #KuwaitSiteCollapse

Posted by Madhyamam on Wednesday, February 12, 2020