ಜಮ್ಮು-ಕಾಶ್ಮೀರ: ಪಂಚಾಯತ್ ಚುನಾವಣೆ ಬ್ಯಾಲೆಟ್ ಪೇಪರಿನಲ್ಲಿ

0
787

ಸನ್ಮಾರ್ಗ ವಾರ್ತೆ

ಜಮ್ಮು, ಫೆ. 14: ಮೂವರು ಮುಖ್ಯಮಂತ್ರಿ ಗಳ ಸಹಿತ ರಾಜಕೀಯ ನಾಯಕರನ್ನು ಆರು ತಿಂಗಳಿನೀಂದ ಜೈಲಿನಲ್ಲಿರಿಸಿರುವುದರ ಮಧ್ಯೆಯೇ ಜಮ್ಮು ಕಾಶ್ಮೀರದ ಪಂಚಾಯತ್ ಚುನಾವಣೆಯನ್ನು ಕೇಂದ್ರ ಸರಕಾರ ಘೋಷಿಸಿದ್ದು 12,500 ಪಂಚಾಯತ್ ಸೀಟುಗಳಿಗೆ ಮಾರ್ಚ್ ಐದರಿಂದ 20ರವರೆಗೆ ಚುನಾವಣೆಯು ಬ್ಯಾಲೆಟ್ ಪೇಪರಿನಲ್ಲಿ ನಡೆಯಲಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಶೈಲೇಂದ್ರ ಕುಮಾರ್ ಹೇಳಿದರು. ಜಮ್ಮುಕಾಶ್ಮೀರ ವಿಶೇಷ ಸ್ಥಾನ ಮಾನ ರದ್ದುಪಡಿಸಿದ ಬಳಿಕ ಮೊದಲ ಚುನಾವಣೆ ಇದು. ಫೆಬ್ರವರಿ ಹದಿನೈದರಂದು ಮೊದಲ ಪ್ರಕಟಣೆಯನ್ನು ಸರಕಾರ ಹೊರಡಿಸಲಿದೆ.

ಮಾರ್ಚ್ ಐದಕ್ಕೆ ಮೊದಲ ಹಂತದ ಚುನಾವಣೆ 7,9,12,14,16, 18, 20ಕ್ಕೆ ನಡೆಯಲಿದೆ. ನಂತರ ಮಾರ್ಚ್ 26ರಂದು 11639 ಪಂಚಾಯತ್ ಸ್ಥಾನಗಳಿಗೆ ಚುನಾವಣೆಯು ನಡೆಯಲಿದೆ. 1011 ಸರಪಂಚ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 2018ರಲ್ಲಿ ನಡೆದಿದ್ದ ಪಂಚಾಯತ್, ಸರ್‍ಪಂಚ್ ಚುನಾವಣೆಯನ್ನು ಪಿಡಿಪಿ, ನ್ಯಾಶನಲ್ ಕಾನ್ಫರೆನ್ಸ್ ಬಹಿಷ್ಕರಿಸಿತ್ತು. ಶೇ. 60ರಷ್ಟು ಸ್ಥಾನಗಳು ಖಾಲಿಯಿವೆ. ಇವುಗಳಿಗೆ ಈಗ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲ, ಉಮರ್ ಅಬ್ದುಲ್ಲ, ಮೆಹ್‍ಬೂಬ ಮುಫ್ತಿಯವರು ಬಂಧನದಲ್ಲಿದ್ದಾರೆ. ಉಪಚುನಾವಣೆ ಘೋಷಣೆ ಪ್ರಜಾಪ್ರಭುತ್ವದ ಅಣಕ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿದರು.