ಕೊಲೆ ಯತ್ನ ಪ್ರಕರಣ: ಲಕ್ಷದ್ವೀಪ ಸಂಸದನಿಗೆ ಹತ್ತು ವರ್ಷ ಜೈಲು ಶಿಕ್ಷೆ

0
536

ಸನ್ಮಾರ್ಗ ವಾರ್ತೆ

ಕವರತ್ತಿ: ಲಕ್ಷದ್ವೀಪದ ಸಂಸದ ಮುಹಮ್ಮದ್ ಫೈಝಲ್ ಹತ್ತು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಎನ್.ಸಿ.ಪಿ ನೇತಾರ ಮುಹಮ್ಮದ್ ಫೈಝಲ್ 2009ರಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಇತರ ಮೂವರಿಗೂ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕವರತ್ತಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈ ತೀರ್ಪು ನೀಡಿದೆ.

ಫೈಝಲ್‌ರ ಸಹೋದರ ಮುಹಮ್ಮದ್ ಅಮೀನ್, ಮಾವ ಹುಸೈನ್ ಶಿಕ್ಷೆಗೊಳಗಾದ ಇತರ ಇಬ್ಬರು ಅಪರಾಧಿಗಳು. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನಡೆದ ಹೊಡೆದಾಟ ಪ್ರಕರಣದ ವಿಚಾರಣೆಯ ಬಳಿಕ ಈ ತೀರ್ಪು ಹೊರಬಿದ್ದಿದೆ. ಮಾಜಿ ಸಂಸದ ಪಿಎಂ ಸಈದ್‌ರವರ ಅಳಿಯನ ಕೊಲೆಗೆ ಯತ್ನಿಸಲಾಗಿತ್ತು ಎಂದು ಪ್ರಕರಣ ದಾಖಲಿಸಲಾಗಿತ್ತು.