ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದ ವಿಧ್ಯಾರ್ಥಿನಿಯರಿಗೆ ಮತ್ತು ಮಹಿಳಾ ನೌಕರರಿಗೆ ಆರ್ತವ(ಋತುಸ್ರಾವ)ದ ವೇಳೆ ರಜೆ ನೀಡಬೇಕೆಂದು ಆಗ್ರಹಿಸಿ ಸುಪ್ರೀಮ್ ಕೋರ್ಟಿಗೆ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಆರ್ತವದ ವೇಳೆ ಮಹಿಳೆಯರು ಅನುಭವಿಸುವ ಯಾತನೆ ಹೃದಯಾಘಾತದ ನೋವಿಗೆ ಸಮಾನವಾದುದು ಎಂದು ಯುನಿವರ್ಸಿಟಿ ಕಾಲೇಜು ಲಂಡನ್ ನಡೆಸಿದ ಅಧ್ಯಯನದ ಪ್ರತಿಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ತವದ ಸಂದರ್ಭದಲ್ಲಿ ಉದ್ಯೋಗದ ಅವರ ಕಾರ್ಯಕ್ಷಮತೆಗೆ ದಕ್ಕೆ ಉಂಟಾಗುತ್ತದೆ. ಡೊಮಾಟೊ, ಸ್ವಿಗ್ಗಿ, ಗೊಸುಪ್ ಮುಂತಾದ ಕಂಪೆನಿಗಳ ಸಹಿತ ಹಲವು ಸಂಸ್ಥೆಗಳು ಆರ್ತವ ದಿನಗಳ ರಜೆಯೊಂದಿಗೆ ವೇತನವನ್ನೂ ನೀಡುತ್ತಿವೆ. ಮಹಿಳೆಯರಿಗೆ ಆರ್ತವ ರಜೆಯನ್ನು ನೀಡದಿರುವುದು ಸಂವಿಧಾನದ 14ನೇ ಕಲಂನ ಅನುಸಾರ ಸಮಾನತೆಯ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.












