ಸನ್ಮಾರ್ಗ ವಾರ್ತೆ
ಪುಣೆ: ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಈಗಿರುವ ನಗರ ವ್ಯಾಪ್ತಿಗೆ ಹೊಸ ಗ್ರಾಮಗಳನ್ನು ಸೇರಿಸಲು ಸೂಚಿಸಿದ್ದರಿಂದ ಭೌಗೋಳಿಕವಾಗಿ ಪುಣೆ ಮುಂಬೈಗಿಂತಲೂ ದೊಡ್ಡ ನಗರ ಎನಿಸಿಕೊಳ್ಳುತ್ತಿದೆ. ಈಗಿರುವ ನಗರ ವ್ಯಾಪ್ತಿಗೆ ಹೊಸದಾಗಿ 23 ಗ್ರಾಮಗಳು ಸೇರ್ಪಡೆಯಾಗುತ್ತಿದ್ದು, ಇದರೊಂದಿಗೆ ಮಹಾರಾಷ್ಟ್ರದ ಅತ್ಯಂತದ ದೊಡ್ಡ ಜಮೀನು ಹೊಂದಿರುವ ನಗರ ಪ್ರದೇಶವಾಗಿ ಪುಣೆ ಅಸ್ತಿತ್ವಕ್ಕೆ ಬರುತ್ತಿದೆ. ಹೊಸ ಪರಿಸ್ಥಿತಿಯಲ್ಲಿ ಪುಣೆ ದೇಶದ ಏಳನೆ ಅತೀದೊಡ್ಡ ಅಧಿಕೃತ ನಗರ ಎನಿಸಿಕೊಳ್ಳುತ್ತಿದೆ.
ಪುಣೆ ಮುನ್ಸಿಪಲ್ ಕಾರ್ಪೊರೆಷನ್ ನಗರದ ವಿಸ್ತೀರ್ಣವನ್ನು ಹೆಚ್ಚಿಸುತ್ತಿದೆ ಎಂದು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆ ಡಿಸೆಂಬರ್ 23ಕ್ಕೆ ಪ್ರಕಟಣೆ ಹೊರಡಿಸಿತ್ತು.
ಮಾಲುಂಗೆ, ಸುಸ್, ಬವ್ದಾನ್ ಬದ್ರುಕ್, ಕಿರ್ಕಾಟ್ವಾಡಿ. ಪಿಸೊಲಿ, ಕೊಡ್ವದವಾಡೆ, ಕೊಪ್ರ, ನಾದೆಂಡ್, ಖಡಕ್ವಾಸ್, ಮಂಜರಿ ಬದ್ರುಕ್ , ನಾರ್ಹೆ, ಹೊಕರ್ವಾಡಿ, ಅಟೊಡಹಂದವೊಡಿ, ವಾಡಚ್ಚಿವಾಡಿ, ವಾಲೆ ವಾಡಿ, ನಂದೇಶಿ, ಸನಸ್ನಗರ್, ಮಗ್ಧೆವಾಡಿ, ಭಿಲರೆವಾಡಿ, ಗುಜರ್ ನಿಂಬಲ್ಕರ್ವಾಡಿ, ಜಂಬುಲ್ ವಾಡಿ, ಕೊಲೆವಾಡಿ, ವಾಖೊಳಿ ಸಹಿತ 23 ಗ್ರಾಮಗಳು ಪುಣೆ ನಗರ ವ್ಯಾಪ್ತಿಗೊಳಪಡುತ್ತಿದೆ. ಈ ಮೂಲಕ ಇನ್ನು ಮುಂಬೈಗೆ 2ನೇ ಸ್ಥಾನ ದೊರಕಲಿದೆ.












