ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಅಮೆರಿಕದ ಫೆಡರಲ್ ಜಡ್ಜ್ ಆಗಿ ಭಾರತೀಯ ಮೂಲದ ಮಹಿಳೆಯನ್ನು ಜೋ ಬೈಡನ್ ಸರಕಾರ ನೇಮಕಗೊಳಿಸಿದೆ. ಸರ್ಕ್ಯೂಟ್ ಕೋರ್ಟು ಜಡ್ಜ್ ಆಗಿರುವ ಶಾಲಿನಾ ಡಿ.ಕುಮಾರ್ ಫೆಡರಲ್ ಜಡ್ಜ್ ಆಗಿ ನೇಮಕಗೊಂಡ ಮಹಿಳೆಯಾಗಿದ್ದು, ಅವರ್ನು ಮಿಶಿಗನ್ ಸಿಕ್ಸ್ತ್ ಸರ್ಕ್ಯೂಟ್ ಕೋರ್ಟಿನಲ್ಲಿ ಜಡ್ಜ್ ಆಗಿ 2007ರಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸಿವಿಲ್, ಕ್ರಿಮಿನಲ್ ಕೇಸುಗಳಲ್ಲಿ ವಿಚಾರಣೆ ನಡೆಸುವ ಸಾಮರ್ಥ್ಯ ಇವರಿಗಿದೆ. ಈ ಹಿಂದೆ ಹತ್ತು ವರ್ಷ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಳಿಕ 2007ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡಿದ್ದರು. ಶಾಲಿನಾ 1993ರಲ್ಲಿ ಮಿಶಿಗನ್ ಯುನಿವರ್ಸಿಟಿ ಮತ್ತು 1996ರಲ್ಲಿ ಡೆಟ್ರಾಯಿಟ್ ಯುನಿವರ್ಸಿಟಿಯಿಂದ ಶಿಕ್ಷಣ ಪಡೆದಿದ್ದರು.












