ಸಂಘಟನೆಯಲ್ಲಿ ನಾಯಕರು ಪ್ರಶ್ನೆಗೆ ಒಳಗಾಗಬೇಕು

0
158

ಸನ್ಮಾರ್ಗ ವಾರ್ತೆ

✍️ಅಬ್ದುಸ್ಸಲಾಮ್ ವಾಣಿಯಂಬಲಮ್

ಇಸ್ಲಾಮೀ ಸಂಘಟನೆಗಳು ಯಶಸ್ವಿಯಾಗದೆ ಇರುವ ಸಂದರ್ಭಗಳಲ್ಲಿ ಸತ್ವ ಪರೀಕ್ಷೆಗಳನ್ನು ಎದುರಿಸುವಾಗ ಇದು ಅಲ್ಲಾಹನ ತೀರ್ಮಾನವಾಗಿದೆ ಎಂದು ಹೇಳಿ ಮರುಚಿಂತನೆ ನಡೆಸುವುದರಿಂದ ಪಾರಾಗುವ ಪ್ರಕ್ರಿಯೆ ಇಸ್ಲಾಮೀ ಸಂಘಟನೆಯ ಕಾರ್ಯಕರ್ತರಲ್ಲಿದೆ.

ಎಲ್ಲಾ ವಿಚಾರಗಳನ್ನು ಅಲ್ಲಾಹನೇ ನಿರ್ಧರಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಜನರ ಚಟುವಟಿಕೆ ಅನೇಕ ರೀತಿಯ ಸೋಲಿಗೆ ಕಾರಣವಾಗಿರುತ್ತದೆ.

ಜಗತ್ತಿನಲ್ಲಿ ಗೊಂದಲವೆಬ್ಬಿಸುವವರ ಬಗ್ಗೆ ಕುರ್‌ಆನ್ ಹೀಗೆ ಹೇಳಿದೆ: ಸಮುದ್ರದಲ್ಲಿಯೂ ತೀರದಲ್ಲಿಯೂ ಗೊಂದಲವೇ ಕಂಡು ಬರುತ್ತಿದೆ, ಇದು ಜನರ ಕಾರ್ಯ ಚಟುವಟಿಕೆಯಿಂದಾಗಿದೆ:” ಇದು ಇಸ್ಲಾಮೀ ಚಟುವಟಿಕೆಗಳಿಗೆ ಬಾಧಕವಾಗುತ್ತದೆ.

ಉಹುದ್ ಯುದ್ಧದ ಪರಾಜಯ ಅಲ್ಲಾಹನ ತೀರ್ಮಾನವಾಗಿದೆ ಎಂದು ಸಮಾಧಾನ ಪಟ್ಟುಕೊಂಡವರನ್ನು ಅಲ್ಲಾಹನು ತಿದ್ದಿದನು: “ನಿಮಗೆ ವಿಪತ್ತು ಬಂದೆರಗಿದಾಗ ಇದೆಲ್ಲಿಂದ ಬಂತು ಎನ್ನತೊಡಗಿದಿರಾ? ವಸ್ತುತಃ (ಬದ್ರ್ ಯುದ್ದದಲ್ಲಿ) ನಿಮ್ಮ ಕೈಗಳಿಂದ (ವಿರೋಧಿಗಳ ಮೇಲೆ) ಇಮ್ಮಡಿ ವಿಪತ್ತು ಉಂಟಾಗಿತ್ತು. ಪ್ರವಾದಿಯವರೇ(ಸ) ಅವರೊಡನೆ ಹೇಳಿರಿ. ಇದು ನೀವು ಸ್ವತಃ ತಂದುಕೊಂಡ ವಿಪತ್ತು. ಅಲ್ಲಾಹನು ಸಕಲ ಕಾರ್ಯಗಳ ಸಾಮರ್ಥ್ಯವುಳ್ಳವನು. (ಆಲೆ ಇಮ್ರಾನ್: 165)

ಸಂಘಟನೆಯ ಧೋರಣೆಗಳು ಮತ್ತು ಕಾರ್ಯ ವಿಧಾನಗಳು ಮಾತ್ರವಲ್ಲ ಕಾರ್ಯಕರ್ತರ ಮತ್ತು ನಾಯಕರ ಚಟುವಟಿಕೆಗಳನ್ನು ನಿರಂತರವಾಗಿ ಸ್ಪಷ್ಟವಾಗಿ ವಿಮರ್ಶಿಸಿದಾಗ ಸಂಘಟನೆಯು ಯಶಸ್ವಿಯಾಗುತ್ತದೆ. ಯಾಕೆಂದರೆ ಎರಡೂ ವಿಭಾಗದ ಚಟುವಟಿಕೆಗಳು ಸೋಲು ಗೆಲುವುಗಳನ್ನು ನಿರ್ಧರಿಸುತ್ತದೆ.

ವಿಮರ್ಶಿಸುವಾಗ ತಾಪಮಾನ ಮಾತ್ರವೇ ಅಭಿರುಚಿ ಯಾಗಬಾರದು. ಅದಕ್ಕಾಗಿ ಸ್ಪಷ್ಟವಾದ ತಾಪಮಾನ ನಿಶ್ಚಯಿಸಿಯೇ ವಿಮರ್ಶಿಸಬೇಕು.

ಸದಸ್ಯ, ಕಾರ್ಯಕರ್ತರಿರುವ ಸಂಘಟನೆಗಳಲ್ಲಿ ಹಲವು ಬಾರಿ ಅನುಯಾಯಿಗಳ ಕಾರ್ಯ ವಿಧಾನಗಳ ಬಗ್ಗೆ ವಿಮರ್ಶಿಸಿ ವಿಚಾರಣೆ ಮಾಡಲಾಗುತ್ತದೆ. ಆದರೆ ನಾಯಕರ ಚಟುವಟಿಕೆಗಳನ್ನು ಅಷ್ಟು ಸೂಕ್ಷವಾಗಿ ವಿಮರ್ಶಿಸುವುದಿಲ್ಲ. ವಾಸ್ತವದಲ್ಲಿ ಅನುಯಾಯಿಗಳ ಕಾರ್ಯ ಚಟುವಟಿಕೆಗಳಿಗಿಂತ ನಾಯಕರ ಕಾರ್ಯ ಚಟುವಟಿಕೆಗಳು ಮಹತ್ತರವಾದುದಾಗಿದೆ.

ಅನುಯಾಯಿಗಳೇ ಖಲೀಫರನ್ನು ಪ್ರಶ್ನಿಸಿದ ಇತಿಹಾಸದ ಘಟನೆಗಳನ್ನು ನಿರಂತರವಾಗಿ ಹೇಳುತ್ತಾ ಬಂದಿರುವ ಇಸ್ಲಾಮೀ ಸಂಘಟನೆಗಳು ಸ್ವತಃ ತಮ್ಮ ನಾಯಕರ ವಿಚಾರದಲ್ಲಿಯೂ ಪ್ರಶ್ನಿಸುವ ಕಾರ್ಯ ವಿಧಾನಗಳನ್ನು ಸ್ವಾಗತಿಸಬೇಕು.

ಸ್ವವಿಮರ್ಶೆಯ ಕೆಲವು ಮಾದರಿಗಳು
ಹಿಂದೆ ಇಸ್ಲಾಮೀ ಸಂಘಟನೆಗಳಲ್ಲಿ ಕೆಲವು ಸ್ವವಿಮರ್ಶೆಗೆ ಒತ್ತು ಕೊಟ್ಟಿರುವುದನ್ನು ಗಮನಿಸಬೇಕು. ವಿಶ್ವದ ಅತ್ಯಂತ ದೊಡ್ಡ ಇಸ್ಲಾಮೀ ಸಂಘಟನೆಯಾದ “ಅಲ್ ಇಖ್ವಾನುಲ್ ಮುಸ್ಲಿಮೂನ್” ಹಲವು ಬಾರಿ ಸ್ವವಿಮರ್ಶೆ ನಡೆಸಿ ಹಲವು ಧೋರಣೆಗಳು ತಪ್ಪಾಗಿವೆಯೆಂದು ಬಗೆದು ಅದರ ಆಧಾರದಲ್ಲಿ ತಿದ್ದಿಕೊಂಡಿತ್ತು. ಈಜಿಪ್ಟ್ ನಲ್ಲಿ ಇತರ ಪಕ್ಷಗಳ ಬಗ್ಗೆ ಇಮಾಮ್ ಹಸನುಲ್ ಬನ್ನಾ ತಳೆದ ನಿಲುವು ತಪ್ಪಾಗಿದೆ ಎಂದು ಅಭಿಪ್ರಾಯ ಪಡಲಾಯಿತು. ಇಖ್ವಾನ್ ಹೊರತುಪಡಿಸಿದ ಎಲ್ಲಾ ಪಕ್ಷಗಳನ್ನು ವಿಸರ್ಜಿಸಬೇಕೆಂಬುದು ಅವರ ನಿರ್ಧಾರವಾಗಿತ್ತು. ಅದು ದೇಶದ ಬಹುಪಕ್ಷೀಯ ಸಂಪ್ರದಾಯವನ್ನು ನಿರಾಕರಿಸುವ ನಿಲುವಾಗಿತ್ತು. ಶೈಖ್ ರಾಶಿದುಲ್ ಗನೂಶಿ, ಡಾಕ್ಟರ್ ಹಸನ್ ತುರಾಬಿ ಮುಂತಾದವರು ಅದನ್ನು ಹಿಂದೆಯೇ ತಳ್ಳಿ ಹಾಕಿದ್ದರು.

ಹಸನುಲ್ ಬನ್ನಾರ ನಿರ್ಧಾರವನ್ನು ವಿಮರ್ಶಿಸುತ್ತಾ ರಾಶಿದುಲ್ ಗನೂಶಿ ಹೀಗೆ ಬರೆದರು: “ಅದು ಬಹಳ ಕೆಟ್ಟದಾದ ನಿರ್ಧಾರವಾಗಿತ್ತು. ಬನ್ನಾರ ಸಂಘಟನೆ ಆ ನಿರ್ಧಾರ ಕೈಗೊಂಡಿತ್ತು. ಇಸ್ಲಾಮೀ ಸಂಘಟನೆ ಆ ಮೂಲಕ ಸಮುದಾಯದ ಮೇಲೆ ಕಠಿಣ ನಿರ್ಬಂಧ ಹೇರಿತ್ತು. ರಾಜಕೀಯವಾಗಿಯೂ ಸೈದ್ಧಾಂತಿಕವಾಗಿಯೂ ಸಮುದಾಯದ ಭಾಗವಾಗಿ ಸಕ್ರಿಯವಾಗಿ ಚಟುವಟಿಕೆಯಲ್ಲಿದ್ದು ಬಹುಸಂಖ್ಯಾತರಿಗೆ ನಮ್ಮ ಯೋಜನೆಗಳನ್ನು ಅರ್ಥಮಾಡಿಸಿ ಕೊಡುವಲ್ಲಿ ಸ್ಥಿರವಾಗಿರುವುದರ ಬದಲು ಪರರನ್ನು ನಿರಾಕರಿಸುವ ಮೂಲಕ ಲೋಪವೆಸಗಿತ್ತು. ಕಮ್ಯೂನಿಸ್ಟರನ್ನೂ, ಸಮಾಜವಾದಿಗಳನ್ನೂ, ಪ್ರಜಾಪ್ರಭುತ್ವವಾದಿಗಳನ್ನೂ ಸಮುದಾಯದ ಒಂದು ಭಾಗವಾಗಿ ಕಾಣಲು ಇಂದಿಗೂ ಇಸ್ಲಾಮೀ ಸಂಘಟನೆ ಉದಾಸೀನತೆ ತೋರಿದೆ. ಇತರೆಲ್ಲಾ ಸಂಘಟನೆಗಳನ್ನು ವಿಸರ್ಜಿಸಬೇಕು. ಇಸ್ಲಾಮಿನ ಹೆಸರಲ್ಲಿ ಮುಸ್ಲಿಮರ ಹೆಸರಲ್ಲಿ ನಾವು ಮಾತ್ರ ಮಾತನಾಡಿದರೆ ಸಾಕು ಎಂಬ ನಿಲುವು ಹಸನುಲ್ ಬನ್ನಾರದ್ದಾಗಿತ್ತು.

ಬಳಿಕ ಇಖ್ವಾನ್ ತನ್ನ ನಿಲುವನ್ನು ಬದಲಿಸಿತು. ಅದು ಬಹುಪಕ್ಷೀಯ ವ್ಯವಸ್ಥೆಯನ್ನು ಸ್ವಾಗತಿಸಿತು. ಮಾತ್ರವಲ್ಲ, ಈಜಿಪ್ಟ್ ನಲ್ಲಿ ಅಲ್ಪಸಂಖ್ಯಾತ ವಿಭಾಗವಾದ ಕೋಪ್ಟಿಕ್ ಕ್ರೈಸ್ತರಿಗೆ ಹೊಸ ಪಕ್ಷ ರಚಿಸಲು ಬೆಂಬಲ ನೀಡಿತು. ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿತು. ಕಾರ್ಯ ಚಟುವಟಿಕೆಗಳಿಗೆ ಸ್ವಾತಂತ್ರ್ಯವಿರದ ಕಾಲದಲ್ಲಿ ವಹ್ದ್ ನಂತಹ ಸೆಕ್ಯುಲರ್ ಪಕ್ಷದ ಅಭ್ಯರ್ಥಿ ಗಳಾಗಿಯೂ ಸ್ಪರ್ಧಿಸಿ ಇಖ್ವಾನ್ ಗೆದ್ದಿತು.

ಮಹಿಳೆಯರಿಗೆ ಮತದಾನದ ಹಕ್ಕು, ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕುಗಳು ಬನ್ನಾರ ಕಾಲದಲ್ಲಿ ಅಲ್ ಇಖ್ವಾನುಲ್ ಮುಸ್ಲಿಮೂನ್ ನಲ್ಲಿ ಇರಲಿಲ್ಲ. ಆದರೆ ಬನ್ನಾರ ನಂತರ ಆ ನಿಲುವಿನಲ್ಲಿ ಬದಲಾವಣೆಯುಂಟು ಮಾಡಲಾಯಿತು.

ಟ್ಯುನೀಶಿಯಾದ ಅನ್ನಹ್ದ ಸಂಘಟನೆಯು ಸ್ವವಿಮರ್ಶೆಯ ವಿಚಾರದಲ್ಲಿ ಗಮನಾರ್ಹವಾದ ಹೆಜ್ಜೆಯಿರಿಸಿದ್ದ ಮತ್ತೊಂದು ಇಸ್ಲಾಮೀ ಸಂಘಟನೆಯಾಗಿದೆ. 1972ರಲ್ಲಿ ಸಂಘಟನೆ ಸ್ಥಾಪನೆಗೊಂಡ ಬಳಿಕ 2010ರ ಮಲ್ಲಿಗೆ ಕ್ರಾಂತಿಯ ತನಕ ಸೆರೆಮನೆಯಲ್ಲಿ ಕಳೆದ ಅದರ ನಾಯಕರು ಕಾರಾಗ್ರಹ ಮತ್ತು ಅಭಯ ನೀಡಿದ ದೇಶಗಳಲ್ಲಿದ್ದುಕೊಂಡು ನಿರಂತರ ಸ್ವವಿಮರ್ಶೆ ನಡೆಸಿದರು. ಮಾತ್ರವಲ್ಲ ಅದನ್ನು ಕೃತಿಯ ರೂಪದಲ್ಲಿಯೂ ತಂದರು. ಆ ಸ್ವವಿಮರ್ಶೆಯ ಮೂಲಕ “ಹರ್ಕತುಲ್ ಇತ್ತಿಜಾಹಿಲ್ ಇಸ್ಲಾಮಿ” ಸಂಘಟನೆಯು ಅನ್ನಹ್ದವಾಗಿ ಬದಲಾಯಿತು. ಕೊನೆಯಲ್ಲಿ ಅದು ಸಾಂಪ್ರದಾಯಿಕ ಇಸ್ಲಾಮೀ ಸಂಘಟನೆಯಾಗದೆ ರಾಷ್ಟ್ರೀಯ ರಾಜಕೀಯ ಸಂಘಟನೆಯಾಯಿತು. ಸಂದೇಶ ಪ್ರಚಾರ ಮಾತ್ರ ಅದರ ಕಾರ್ಯವಲ್ಲ. ಸಂದೇಶ ಪ್ರಚಾರದ ಜೊತೆಗೆ ರಾಜಕೀಯ ಬೆರೆಸಿ ಮುಂದುವರಿಯಲಾಗದು ಎಂದು ಘೋಷಿಸಿತು. ಅನ್ನಹ್ದ ಎಂಬ ಇಸ್ಲಾಮೀ ಸಂಘಟನೆಯು ಒಂದು ರಾಷ್ಟ್ರಮಟ್ಟದ ರಾಜಕೀಯ ಸಂಘಟನೆಯಾಗಿ ಅದರ ಕಾರ್ಯಕರ್ತರು ಇಸ್ಲಾಮೀ ಚಟುವಟಿಕೆಗಳನ್ನು ಪ್ರಾದೇಶಿಕ ವಾದ ಇತರ ವ್ಯವಸ್ಥೆಗಳ ಮೂಲಕ ಸಾರ್ವಜನಿಕ ವಲಯಗಳಲ್ಲಿ ಭಾಗವಾಗಿದ್ದುಕೊಂಡು ನಿರ್ವಹಿಸಬೇಕೆಂದು ನಿರ್ಧರಿಸಿತು. ಅದರ ಜೊತೆಗೆ ಟ್ಯುನೀಶಿಯಾದ ಅತೀ ಪ್ರಬಲ ಪಕ್ಷವಾಗಿ ಚುನಾವಣೆಯಲ್ಲಿ ಗೆದ್ದು ಅನ್ನಹ್ದ ಮತ್ತಿತರ ಜಾತ್ಯತೀತ ಪಕ್ಷಗಳ ಜೊತೆ ಸೇರಿ ಆಡಳಿತ ನಡೆಸಲು ಪ್ರಯತ್ನಿಸಿತು. ಸೆಕ್ಯುಲರ್ ಪಕ್ಷದ ಜೊತೆ ಮೈತ್ರಿ ಸಾಧಿಸಿ ಟ್ರೋಯಿಕ್ ಎಂಬ ಮೈತ್ರಿಕೂಟ ರಚಿಸಿತು. ಟ್ಯುನೀಶಿಯಾವನ್ನು ಒಂದು ಇಸ್ಲಾಮೀ ರಾಷ್ಟ್ರವಾಗಿ ಮಾರ್ಪಡಿಸುತ್ತೇವೆ ಎಂಬ ಯೋಜನೆಯನ್ನು ಅದು ಘೋಷಿಸಿಲ್ಲ. ಮಾತ್ರವಲ್ಲ ಸಂವಿಧಾನದಲ್ಲಿ ಇಸ್ಲಾಮೀ ಶರೀಅತ್ ನಿಯಮದ ಶ್ರೇಯಸ್ಸು ಎಂದು ಬರೆದಿಡಬಾರದು ಎಂದು ಸಂಘಟನೆ ನಿರ್ಧರಿಸಿತು. ರಾಜಕೀಯದ ಧರ್ಮ ಇಸ್ಲಾಮ್ ಆಗಿದೆ ಎಂಬ ವಚನದಲ್ಲಿ ಅವರು ಸಂತೃಪ್ತರಾದರು. ಟ್ಯುನೀಶಿಯಾದ ವಿಶೇಷವಾದ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿಲುವು ತಾಳಲಾಗಿತ್ತು.

ಸಿರಿಯಾದ ಇಖ್ವಾನ್ ಕೂಡಾ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಎಂಬತ್ತರ ದಶಕದಲ್ಲಿ ಹಮಾತ್‌ನಲ್ಲಿ ಕ್ರಾತಿಯ ಪ್ರಯತ್ನ ನಡೆಸಲಾಗಿತ್ತು. ಹಾಫಿಝುಲ್ ಅಸದ್ ಮೂವತ್ತು ಸಾವಿರದಷ್ಟು ಜನರ ಮಾರಣಹೋಮ ನಡೆಸಲು ಅದು ಕಾರಣವಾಗಿತ್ತು. ಇದಕ್ಕೆ ಅವಕಾಶವಾಗುವಂತೆ ವರ್ತಿಸಿದ್ದು ತಪ್ಪು ನಿರ್ಧಾರವಾಗಿತ್ತು ಎಂದು ಇಖ್ವಾನಿನ ಮುರ್ಶಿದ್ ಹಸನ್ ಹುವೈದಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂದು ಹಾಫಿಝುಲ್ ಹಸನ್ ಇಖ್ವಾನಿನ ಜೊತೆ ಸಮಾಲೋಚನಾ ಚರ್ಚೆಗೆ ಸಿದ್ದರಾಗಿದ್ದರು. ಆದರೆ ಸಂಘಟನೆಯ ಯುವಕರು ಅದನ್ನು ತಳ್ಳಿ ಹಾಕಿದ್ದರು ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು. ಇಂತಹದ್ದೇ ಲೋಪ ಈಜಿಪ್ಟ್ ನಲ್ಲಿ ಜಮಾಲ್ ಅಬ್ದುನ್ನಾಸಿರ್ ಜೊತೆಗಿನ ಸಂಧಾನದ ವಿಚಾರದಲ್ಲಿಯೂ ಇಖ್ವಾನ್‌ಗೆ ಸಂಭವಿಸಿತ್ತು ಎಂದು ಕೆಲ ನೇತಾರರು ಅಭಿಪ್ರಾಯ ಪಟ್ಟಿದ್ದರು. ಟ್ಯುನೀಶಿಯಾದ ಅನ್ನಹ್ದ ಎಪ್ಪತ್ತರ ದಶಕದಲ್ಲಿ ಆಡಳಿತಗಾರರ ಬಗ್ಗೆ ತಳೆದ ಉಗ್ರ ನಿಲುವು ವಾಸ್ತವ ಪ್ರಜ್ಞೆಯ ಕೊರತೆಯಿಂದ ಸಂಭವಿಸಿತ್ತು ಎಂದು ನಂತರ ಸಂಘಟನೆ ಹೇಳಿತ್ತು. ಹಾಗೆಯೇ ಅಲ್ಜೀರಿಯಾದಲ್ಲಿ ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್‌ನ ಚುನಾವಣೆಯ ವಿಜಯವನ್ನು ಬುಡಮೇಲು ಕೃತ್ಯ ಮಾಡಿದರು ಎಂದು ಗಲಭೆಗೆ ಇಳಿದದ್ದು ತಪ್ಪು ನಿರ್ಧಾರ ಮತ್ತು ಅಂದು ಸೇನಾಡಳಿತದ ವಿರುದ್ಧ ಹರಿಹಾಯ್ದಿರುವುದು ಮೂರ್ಖತನದ ನಿರ್ಧಾರವಾಗಿದೆ ಎಂದು ಹದಿನೈದು ವರ್ಷಗಳ ಪ್ರವಾಸಿ ಬದುಕು ಸವೆಸಿ ಅಲ್ಜೀರಿಯಾ ತಲುಪಿದ ಸಾಲ್ವೇಶನ್ ಫ್ರಂಟ್ ನಾಯಕ ಶೈಖ್ ರಾಬಿಹ್ ಕಬೀರ್ ತಪ್ಪೊಪ್ಪಿಕೊಂಡಿರುವುದು ಮತ್ತೊಂದು ಉದಾಹರಣೆಯಾಗಿದೆ.
[ಸಶೇಷ]