ಸನ್ಮಾರ್ಗ ವಾರ್ತೆ
ಮಾಸ್ಕೊ: ರಷ್ಯಾದ ಮಹಿಳೆಯರು ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
ಯುಕ್ರೇನ್ ಯುದ್ಧದಲ್ಲಿ ಹಲವಾರು ರಷ್ಯಾದ ಸೈನಿಕರು ಮೃತಪಟ್ಟಿದ್ದಾರೆ. ಈ ನಷ್ಠ ಭರಿಸಲು ಮಹಿಳೆಯರು ತ್ಯಾಗ ಮಾಡಬೇಕಾಗಿದೆ. ಅಂದರೆ ಹೆಚ್ಚು ಹೆಚ್ಚು ಮಕ್ಕಳನ್ನು ದೇಶಕ್ಕಾಗಿ ಹೆತ್ತು ಕೊಡಬೇಕಾಗಿದೆ ಎಂದು ಪುಟಿನ್ ಹೇಳಿದರು.
1990ರಿಂದ ರಷ್ಯಾದಲ್ಲಿ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದ್ದು ನಿಜ. ಕಳೆದ ಫೆಬ್ರವರಿಯಲ್ಲಿ ಯುಕ್ರೇನ್ ಯುದ್ಧದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರಷ್ಯಾದ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಪುಟಿನ್ ಹೇಳಿದ್ದು ಜನಸಂಖ್ಯೆ ಹೆಚ್ಚಿಸುವುದು ಸರಕಾರದ ಯೋಜನೆಯಾಗಿದೆ.
ಒಂದು ಕಾಲದಲ್ಲಿ ಹಿಂದಿನ ತಲೆಮಾರಿನ ಮಹಿಳೆಯರು ಏಳು ಮಕ್ಕಳ ಸರಾಸರಿಯಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದರು. ನಂತರದ ತಲೆಮಾರಿನಲ್ಲಿಯೂ ಅದು ಮುಂದುವರಿಯಿತು. ಈ ಪರಂಪರೆ ಮುಂದುವರಿಯಬೇಕು ಮತ್ತು ನಮ್ಮದು ದೊಡ್ಡ ಕುಟುಂಬ ಆಗಿರಬೇಕೆಂದು ಪುಟಿನ್ ಜನರಿಗೆ ಕರೆ ನೀಡಿದ್ದಾರೆ.
ಇನ್ನು ನಮ್ಮ ಗುರಿ ಜನಸಂಖ್ಯೆ ಹೆಚ್ಚಿಸುವುದು ಆಗಿರಬೇಕಾಗಿದೆ. ರಷ್ಯನ್ ಆರ್ಥೋಡೆಕ್ಸ್ ಚರ್ಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಟಿನ್ ಈ ಕರೆ ನೀಡಿದ್ದಾರೆ. ಹಲವು ಪರಂಪರಾಗತ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2023 ಜನವರಿ ಒಂದಕ್ಕೆ ಲೆಕ್ಕ ಪ್ರಕಾರ ರಷ್ಯಾದಲ್ಲಿ 146,447,424 ಜನರು ಇದ್ದಾರೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ. 1999ರಲ್ಲಿ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಮೊದಲ ಬಾರಿ ಚುನಾಯಿತರಾಗಿದ್ದರು. ಅಂದಿನ ಜನಸಂಖ್ಯೆಗೆ ಹೋಲಿಸಿದರೆ ಈಗಿರುವ ಜನರ ಸಂಖ್ಯೆ ತುಂಬಾ ಕಡಿಮೆ ಆಗಿದೆ ಎಂದು ಪುಟಿನ್ ಸೂಚಿಸಿದ್ದಾರೆ.












