ಸನ್ಮಾರ್ಗ ವಾರ್ತೆ-
ದಿಸ್ಪುರ, ಡಿ.10: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಅಸ್ಸಾಮ್ನಲ್ಲಿ ಬಂದ್ ನಡೆಯುತ್ತಿದ್ದು ಇಂದು ಬೆಳಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರಗೆ ಹನ್ನೆರಡು ಗಂಟೆಗಳ ಬಂದ್ ಜಾರಿಯಲ್ಲಿದೆ. ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಝೇಶನ್ಸ್ ಮತ್ತು ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ ಬಂದ್ಗೆ ಕರೆ ನೀಡಿವೆ. ದಿಬ್ರುಗರ್ ನಲ್ಲಿ ಮಹಿಳೆಯರು, ಮಕ್ಕಳ ಸಹಿತ ಪ್ರದೇಶ ವಾಸಿಗಳು ಪ್ರತಿಭಟನೆ, ಧರಣಿ ನಡೆಸುತ್ತಿದ್ದಾರೆ. ಅಂಗಡಿ ಮಾರುಕಟ್ಟೆಗಳು ಸಂಪೂರ್ಣ ಮುಚ್ಚಿವೆ.
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸಾಗಿದ್ದು ಅದನ್ನು ವಿರೋಧಿಸಿ ರಾಜ್ಯದ ಹಲವು ಭಾಗದಲ್ಲಿ ಅಹಿತಕರ ಘಟನೆಗಳು ನಡೆದವು. ಅಸಾಮ್ ಮುಖ್ಯಮಂತ್ರಿಯ ಮನೆ ಮುಂದೆ ಅಸ್ಸಾಂ ಬಿಜೆಪಿ ಅಧ್ಯಕ್ಷನ ವಸತಿಯ ಮುಂದೆ ಬಲವಾದ ಪ್ರತಿಭಟನೆ ನಡೆಯುತ್ತಿವೆ. ಎಲ್ಲ ವಿಶ್ವವಿದ್ಯಾನಿಲಯ ಪರೀಕ್ಷೆಗಳೂ ರದ್ದುಗೊಂಡಿವೆ. ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಕಾರರ ಮೇಲೆ ನಿನ್ನೆ ಪೊಲೀಸರು ಲಾಠಿ ಬೀಸಿದ್ದರು. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರ ಹೊತಾದ ಎಲ್ಲರಿಗೂ ಪೌರತ್ವ ನೀಡುವ ಪೌರತ್ವ ತಿದ್ದು ಪಡಿ ಮಸೂದೆ ನಿನ್ನೆ ಲೋಕಸಭೆಯಲ್ಲಿ ಪಾಸಾಗಿತ್ತು. 311 ಪರ ಮತ್ತು 80 ವಿರುದ್ಧ ಮತಗಳು ಬಿದ್ದಿದ್ದವು.












