ಉತ್ತರಪ್ರದೇಶ ಪ್ರವೇಶಿಸಲು ಸಿಗದ ಅನುಮತಿ; ಗಡಿಯಲ್ಲಿ 5000 ವಲಸೆ ಕಾರ್ಮಿಕರು ಕಂಗಾಲು

0
1259

ಸನ್ಮಾರ್ಗ ವಾರ್ತೆ

ಮಹೋಬಾ,ಮೇ.10: ಕೊರೋನಾ ವೈರಸ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಬಡ ಮತ್ತು ಕಾರ್ಮಿಕ ವರ್ಗದ ಜನರನ್ನು ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಉತ್ತರ ಪ್ರದೇಶದ ಮಹೋಬಾದಲ್ಲಿ ಯುಪಿ-ಮಧ್ಯಪ್ರದೇಶದ ಗಡಿಯಲ್ಲಿ ಸುಮಾರು ಐದು ಸಾವಿರ ವಲಸೆ ಕಾರ್ಮಿಕರು ಗಡಿ ದಾಟಲು ಅನುಮತಿ ಇಲ್ಲದೇ ಕಂಗಾಲಾಗಿದ್ದಾರೆ. ತಮ್ಮ ಮನೆಗಳಿಗೆ ಹೋಗಲು ಕಾರ್ಮಿಕರು ಇತರ ರಾಜ್ಯಗಳಿಂದ ಹೇಗೋ ಬಂದು ತಲುಪ್ಪಿದ್ದಾರೆ. ಆದರೆ ಈಗ ಈ ಕಾರ್ಮಿಕರಿಗೆ ಉತ್ತರ ಪ್ರದೇಶದ ಗಡಿಯೊಳಗಡೆ ಪ್ರವೇಶಿಸಲು ಅನುಮತಿ ಲಭಿಸಿಲ್ಲ.

ಗಡಿಯನ್ನು ಜಿಲ್ಲೆಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸುತ್ತುವರೆದಿದ್ದು ಗಡಿ ದಾಟಲು ಅವಕಾಶವನ್ನು ನೀಡುತ್ತಿಲ್ಲ.

ಗುಜರಾತ್, ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯಗಳಿಂದ ಕಾಲ್ನಡಿಗೆಯಿಂದಲೂ ಇತರೆ ಮೂಲಗಳಿಂದ ಮನೆ ಸೇರಲು ತವಕಿಸುತ್ತಿರುವ ಸಾವಿರಾರು ಕಾರ್ಮಿಕರು ಇಲ್ಲಿ ಸಿಕ್ಕಿಬಿದ್ದಿದ್ದಾರೆ. ಲಾಕ್‌ಡೌನ್ ನಿಂದಾಗಿ ಅಸಹಾಯಕ, ಬಡ ಕಾರ್ಮಿಕರು ತೆರೆದ ಆಕಾಶದ ಕೆಳಗೆ ಸುಡುವ ಬಿಸಿಲಲ್ಲಿ ಕುಳಿತುಕೊಳ್ಳುವಂತಾಗಿದೆ.

ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಅಳುವ ಹೃದಯವಿದ್ರಾವಕ ದೃಶ್ಯಗಳು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಧ್ಯಪ್ರದೇಶದ ಗಡಿಯಲ್ಲಿ ಕಂಡು ಬಂದಿವೆ.