ಲಾಕ್ ಡೌನ್: ಜಮಾಅತೆ ಇಸ್ಲಾಮಿ ಹಿಂದ್ ನಿಂದ 25 ರಾಜ್ಯಗಳಲ್ಲಿ 23 ಕೋಟಿಯ ನೆರವು

0
1969

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ ಲಾಕ್ಡೌನ್ ಆರಂಭವಾದಾಗಿನಿಂದ ಜಮಾಅತೆ ಇಸ್ಲಾಮಿ ಹಿಂದ್ ಸರ್ವ ರೀತಿಯ ನೆರವು ನೀಡುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಸೇರಿದಂತೆ ದೇಶದ 25 ರಾಜ್ಯಗಳಲ್ಲಿ ತನ್ನ ಮಾನವೀಯ ಸೇವೆಯನ್ನು ನಿರಂತರವಾಗಿ ನೀಡುತ್ತಿದೆ, ಇದಕ್ಕಾಗಿ ಜಮಾಅತೆ ಇಸ್ಲಾಮಿ ಹಿಂದ್ ತನ್ನ ಎಲ್ಲಾ ಸೇವಾ ಸಂಸ್ಥೆಗಳ ನುರಿತ ಕಾರ್ಯಕರ್ತರನ್ನು ವಿನಿಯೋಗಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕುರಿತಾದ ವಿವರವಾದ ಪಟ್ಟಿಯನ್ನು ಅದು ಬಿಡುಗಡೆಗೊಳಿಸಿದೆ. .

ಕರ್ನಾಟಕದಲ್ಲಿ ತುರ್ತು ಸಂಧರ್ಭದಲ್ಲಿ ನೆರವಾಗುವ ಎಚ್ ಆರ್ ಸ್ (HRS) ಮತ್ತು ಕೇರಳದಲ್ಲಿ ಐ ಆರ್ ಡಬ್ಲ್ಯೂ (IRW) ಎಲ್ಲಾ ತುರ್ತು ಸಂಧರ್ಭದಲ್ಲಿ ನೆರವಾಗುತ್ತಿದೆ, ಸೋಷಿಯಲ್ ಸರ್ವಿಸ್ ವಿಂಗ್ (SSU) ರೇಷನ್ ವಿತರಿಸುವಲ್ಲಿ ಮತ್ತು ವೈದ್ಯಕೀಯ ನೆರವು ನೀಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ, ಎಸ್ ಐ ಒ (SIO) ದ ನುರಿತ ಸ್ವಯಂ ಸೇವಕರು ಈ ಚಟುವಟಿಕೆಗಳಿಗಾಗಿ ಸಮಯ ವ್ಯಯಿಸುತ್ತಿದ್ದಾರೆ, ಮಾರ್ಚ್ 20 ರಿಂದ ಎಪ್ರಿಲ್ 20 ರವರೆಗೆ 23 ಕೋಟಿಗೂ ಅಧಿಕ ಹಣವನ್ನು ಕೊರೋನಾ ಸಂತ್ರಸ್ಥರಿಗಾಗಿ ವ್ಯಯಿಸಲಾಗಿದೆ, ಈ ಸೇವೆಯಲ್ಲಿ ಮುಖ್ಯವಾಗಿ ರೇಷನ್ ತಲುಪಿಸುವುದು, ವಿವಿಧ ಪ್ರದೇಶದಲ್ಲಿ ಬಾಕಿ ಉಳಿದುರುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವುದು, ವೈದ್ಯಕೀಯ ನೆರವು, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮತ್ತಿತರ ಅಗತ್ಯ ನೆರವು ಒಳಗೊಂಡಿರುತ್ತದೆ, ದೇಶದ ಉದ್ದಗಲಕ್ಕೂ ಈ ಸೇವೆ ಮುಂದುವರೆದಿದೆ ಎಂದು ಅದು ತಿಳಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.