ಎಂ.ಫ್ರೆಂಡ್ಸ್ ಸೇವೆಗೆ 2023ರ “ಪ್ರಜಾವಾಣಿ” ಸಾಧಕ ಪ್ರಶಸ್ತಿ

0
378

ಸನ್ಮಾರ್ಗ ವಾರ್ತೆ

ಮಂಗಳೂರು: ಹತ್ತನೇ ವರ್ಷದತ್ತ ಕಾಲಿಟ್ಟಿರುವ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದು “ಕಾರುಣ್ಯ” ಯೋಜನೆಯ ಅನ್ನದಾನ. ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆ ರೋಗಿಗಳ ಸಹವರ್ತಿಗಳಿಗೆ ದಿನನಿತ್ಯ ರಾತ್ರಿಯ ಆಹಾರ ನೀಡುವ ಕಾಯಕದಲ್ಲಿ 5 ವರ್ಷಗಳಿಂದ ಎಂ.ಫ್ರೆಂಡ್ಸ್ ತೊಡಗಿಸಿಕೊಂಡಿದೆ. ಇದನ್ನು ಗುರುತಿಸಿದ ಡೆಕ್ಕನ್ ಹೆರಾಲ್ಡ್ ಗ್ರೂಪಿನ ರಾಜ್ಯದ ಪ್ರಮುಖ ಪತ್ರಿಕೆ “ಪ್ರಜಾವಾಣಿ”ಯು 2023 ಸಾಧಕರ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜನವರಿ 30 ರಂದು ಪತ್ರಿಕಾ ಕಛೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಗೌರವಿಸಲಿದೆ.