ಮದ್ರಸಾಗಳನ್ನು ಆರ್ ಟಿಇ ಕಾಯ್ದೆಯಡಿಗೆ ತರಬೇಡಿ: ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ

0
808
ಸಾಂದರ್ಭಿಕ ಚಿತ್ರ

ಹೈದರಾಬಾದ್:  ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಗುರುತಿಸಿಕೊಳ್ಳುತ್ತಿರುವ ಮದ್ರಸಾಗಳಂತಹ ಸಂಸ್ಥೆಗಳನ್ನು ರೈಟ್ ಟು ಎಜುಕೇಶನ್ ( ಆರ್ ಟಿಇ) ಕಾಯ್ದೆಯಡಿಯಲ್ಲಿ ತರಬೇಕು ಎಂದು  ರಾಷ್ಟ್ರೀಯ ಸಲಹಾ ಸಮಿತಿ (ಎನ್ಎಸಿ) ಯು ಕೇಂದ್ರ ಸರಕಾರಕ್ಕೆ ಸೂಚಿಸಿದ ಬೆನ್ನಿನಲ್ಲಿಯೇ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧನೆ ಹೇರುವ ಈ ಕ್ರಮವನ್ನು ಧಾರ್ಮಿಕ ಮುಖಂಡರು ಪ್ರಬಲವಾಗಿ ಖಂಡಿಸಿದ್ದಾರೆ.
ಅಖಿಲ ಭಾರತೀಯ ಮುುುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಖಾಲಿದ್ ಸೈಫುಲ್ಲಾಹ್ ರಹ್ಮಾನೀಯವರು ಮಾಧ್ಯಮದವರೊಂದಿಗೆ ಮಾತಾಡುತ್ತಾ, “ಮದ್ರಸಾಗಳ ಸಾರ್ವಭೌಮತ್ವದ ಮೇಲೆ ಆರ್ ಟಿಈ ಹೇರುವುದು- ಸರಕಾರವು ಧಾರ್ಮಿಕ ಸಂಸ್ಥೆಗಳ ತನ್ನ ಹಿಡಿತ ಸಾಧಿಸುವ ಪ್ರಯತ್ನವಾಗಿದೆ. ಸಂವಿಧಾನದ ವಿಧಿ 29 ಮತ್ತು ವಿಧಿ 30 ರಲ್ಲಿ ಮದ್ರಸಾಗಳು ಸಂರಕ್ಷಿಸಲ್ಪಟ್ಟಿವೆ. ಈ ಹಿಂದೆಯೂ ಇಂತಹ ಕೃತ್ಯಕ್ಕೆ ಸರಕಾರವು ಕೈ ಹಾಕಿದ್ದು ಇದನ್ನು ನಾವು ವ್ಯಾಪಕವಾಗಿ ಖಂಡಿಸಿದ್ದೇವೆ ಮತ್ತು ಇನ್ನು ಮುಂದೆ ಬೇಕಾದರೂ ಇದರ ವಿರುದ್ಧ ಪ್ರತಿಭಟನೆಗಿಳಿಯಲು ಸಿದ್ಧರಿದ್ದೇವೆ” ಎಂದರು.
ಸಲಹಾ ಸಮಿತಿಯು ಇತರೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಸರಕಾರ ನಿರ್ದೇಶಿತ ಪಠ್ಯಕ್ರಮಗಳಿದ್ದು ದೇಶದ ಹಲವು ಮದ್ರಸಾಗಳು ಕೇವಲ ಧಾರ್ಮಿಕ ಶಿಕ್ಷಣಕ್ಕೆ ಒಗ್ಗಿಕೊಂಡಿವೆ ಎಂದಿದೆ.