ಸನ್ಮಾರ್ಗ ವಾರ್ತೆ
ಮುಂಬೈ,ಅ.28: ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸಖ್ಯ ಸರಕಾರ ರೂಪೀಕರಿಸುವುದು ಸಮಸ್ಯೆಯಾಗಿ ಇರುವಂತೆ ಎರಡು ಪಾರ್ಟಿಗಳು ಜೊತೆಗೂಡಿ ರಾಜ್ಯಪಾಲರನ್ನು ಭೇಟಿಯಾಗುವುದಿಲ್ಲ ಎಂದು ತಿಳಿದು ಬಂದಿದೆ. ಶಿವಸೇನಾ ನಾಯಕ ದಿವಾಕರ್ ರಾಥೋಡ್ ಬೆಳಗ್ಗೆ 10:30ಕ್ಕೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹನ್ನೊಂದು ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಎರಡು ಪಾರ್ಟಿಗಳ ಪ್ರಕಟಣೆ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನ ತಮಗೆ ಬೇಕೆಂದು ಶಿವಸೇನೆ ಹೇಳುತ್ತಿದೆ. ಬಿಜೆಪಿ ಇದಕ್ಕೊಪ್ಪಿಲ್ಲ.ಉಪಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಬಿಜೆಪಿ ಹೇಳುತ್ತಿದೆ. ಬಿಜೆಪಿಗೆ 105 ಶಾಸಕರಿದ್ದಾರೆ. ಶಿವಸೇನೆಗೆ 56 ಶಾಸಕರು ಇದ್ದಾರೆ. ಬಿಜೆಪಿಯೊಂದಿಗಿನ ಸಂಬಂಧ ಕಡಿದುಕೊಂಡರೆ ಶಿವಸೇನೆಯನ್ನು ಬೆಂಬಲಿಸುವುದನ್ನು ಪರಿಶೀಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.












