ಟ್ರಾಫಿಕ್‍ ನಿಯಮ ಉಲ್ಲಂಘನೆಗೆ ಭಾರೀ ದಂಡ; ಅಸಹಮತ ವ್ಯಕ್ತಪಡಿಸಿದ ಮಹಾರಾಷ್ಟ್ರ

0
545

ಸನ್ಮಾರ್ಗ ವಾರ್ತೆ

ಮುಂಬೈ,ಸೆ.7: ಟ್ರಾಫಿಕ್ ಕಾನೂನು ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡ ವಿಧಿಸುವ ಕಾನೂನಿಗೆ ಮಹಾರಾಷ್ಟ್ರ ಸರಕಾರ ಕೂಡ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಖ್ಯ ಸರಕಾರ ಇದೆ. ಸಾರ್ವಜನಿಕರ ಮೇಲೆ ಅಧಿಕ ಹೊರೆಯಾಗುತ್ತಿರುವ ದಂಡದ ವಿರುದ್ಧ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಿಗೆ ಮಹಾರಾಷ್ಟ್ರ ಸರಕಾರವೂ ಅದರ ವಿರುದ್ಧ ಧ್ವನಿ ಎತ್ತಿದೆ. ಭಾರೀ ದಂಡ ಹೊರಿಸುವ ಕೇಂದ್ರ ಮೋಟಾರು ವಾಹನ ತಿದ್ದುಪಡಿ ಮಸೂದೆ ಜಾರಿಗೊಳಿಸಬೇಕೆ ಬೇಡವೇ ಎಂದು ತೀರ್ಮಾನಿಸುವ ಸ್ವಾತಂತ್ರ್ಯ ರಾಜ್ಯಕ್ಕಿದೆ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ. ಭಾರೀ ದಂಡ ಹೇರಬೇಕಿಲ್ಲ ಎಂದು ಸರಕಾರ ನಿರ್ಧರಿಸಿದೆ ಎಂದೂ ಸಾರಿಗೆ ಸಚಿವ ಶಿವಸೇಯ ದಿವಾಕರ್ ರಾವುತೆ ಹೇಳಿದರು.