ಸನ್ಮಾರ್ಗ ವಾರ್ತೆ
ಮುಂಬೈ,ಸೆ.7: ಪ್ರಕಾಶ್ ಅಂಬೇಡ್ಕರ್ರವರ ವಂಚಿತ್ ಬಹುಜನ್ ಅಗಾಡಿಯಿಂದ ಅಸದುದ್ದೀನ್ ಉವೈಸಿಯವರ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಹೊರ ಬಂದಿದೆ. ಕಳೆದ ಲೋಕಸಭಾ ಚುನಾವಣೆಯ ಸ್ವಲ್ಪ ಸಮಯ ಮೊದಲು ಈ ಸಖ್ಯ ರೂಪುಗೊಂಡಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸೀಟು ಹೊಂದಾಣಿಕೆ ವಿಚಾರದಲ್ಲಿ ಸಖ್ಯ ಮುರಿದು ಬಿದ್ದಿದೆ.
ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿವೆ.
ಇದರಲ್ಲಿ ಮಜ್ಲಿಸ್ಗೆ ಎಂಟು ಸೀಟುಗಳನ್ನು ಮಾತ್ರ ಕೊಡಬಹುದು ಎಂದು ಅಗಾಡಿ ತಿಳಿಸಿತು. ಹಾಲಿ ಶಾಸಕರಿರುವ ಔರಂಗಾಬಾದ್, ಬೈಕುಲಾ ಮಜ್ಲಿಸ್ಗೆ ಕೊಡದಿರುವುದರಿಂದಲೇ ಸಖ್ಯ ಕೊನೆಗೊಂಡಿದೆ ಎಂದು ಮಹಾರಾಷ್ಟ್ರದ ಮಜ್ಲಿಸ್ ಸಂಸದ ಇಮ್ತಿಯಾಝ್ ಜಲೀಲ್ ತಿಳಿಸಿದರು. 2014ರ ವಿಧಾನಸಭಾ ಚುನಾವಣೆಯಲ್ಲಿ 24 ಸೀಟುಗಳಲ್ಲಿ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದಿತ್ತು. ಒಂಬತ್ತು ಕಡೆ ಎರಡನೇ ಮೂರನೆ ಸ್ಥಾನಕ್ಕೆ ತಲುಪಿತ್ತು. ಈಗ ಮಹಾರಾಷ್ಟ್ರದಲ್ಲಿ ಮಜ್ಲಿಸ್ಗೆ ವಿವಿಧ ಕಡೆ 150ರಷ್ಟು ನಗರಸಭಾ ಸದಸ್ಯರಿದ್ದಾರೆ.












