ಮಹಾರಾಷ್ಟ್ರದಲ್ಲಿ ರಾಜ್‍ಠಾಕ್ರೆಯತ್ತ ಬಿಜೆಪಿ

0
1150

ಸನ್ಮಾರ್ಗ ವಾರ್ತೆ

ಮುಂಬೈ, ಜ. 15: ಕಾಂಗ್ರೆಸ್- ಎನ್‍ಸಿಪಿ ಸಖ್ಯದೊಂದಿಗೆ ಶಿವಸೇನೆ ಕೈಜೋಡಿಸಿದ ನಂತರ ಮಹಾರಾಷ್ಟ್ರ ನವನಿರ್ಮಾಣ ಸೇನೆಯೊಂದಿಗೆ ಸಖ್ಯ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಇತ್ತೀಚೆಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆಯವರನ್ನು ಭೇಟಿಯಾಗಿದ್ದರು. ಸಖ್ಯ ಮಾಡಿಕೊಳ್ಳುವ ಕುರಿತು ಚರ್ಚಿಸಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ. ಆದರೆ ತಮ್ಮ ನೀತಿ ಒಪ್ಪಿಕೊಳ್ಳುವುದಾದರೆ ಎಂಎನ್ ಎಸ್‍ನೊಂದಿಗೆ ಮುಂದೆ ಸಖ್ಯ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು. ಶಿವಸೇನೆ ಸ್ಥಾಪಕ ತಂದೆಯ ಅಣ್ಣ ಬಾಳ ಠಾಕರೆಯ ಜನ್ಮದಿನ ಜನವರಿ 23 ಆಗಿದ್ದು, ಅಂದು ರಾಜ್ ಠಾಕ್ರೆ ತನ್ನ ಅಭಿಪ್ರಾಯವನ್ನು ತಿಳಿಸಲಿದ್ದಾರೆ. ಶಿವಸೇನೆ ಸಖ್ಯ ಬಿಟ್ಟದ್ದರಿಂದ ಮತ್ತು ಕಾಂಗ್ರೆಸ್ ಎನ್‍ಸಿಪಿ ಸ್ಥಳೀಯಾಡಳಿತಗಳಲ್ಲಿ ಬಲವರ್ಧಿಸಿಕೊಂಡದ್ದರಿಂದ ಬಿಜೆಪಿಗೆ ಇತರ ಪ್ರಾದೇಶಿಕ ಪಕ್ಷಗಳ ಸಹಾಯ ಅಗತ್ಯವಾಗಿದೆ. ಚುನಾವಣೆಯಲ್ಲಿ ಮತಗಳ ಶತಮಾನ ಕಡಿಮೆಯಾಗಿರುವ ರಾಜ್ ಠಾಕ್ರೆಯ ಪಾರ್ಟಿಗೆ ಸಖ್ಯ ಅನಿವಾರ್ಯವೂ ಆಗಿದೆ. ಬಿಜೆಪಿಯೊಂದಿಗೆ ಸಖ್ಯ ಮಾಡಿಕೊಂಡರೆ ರಾಜ್ ಠಾಕ್ರೆ ಉತ್ತರ ಭಾರತದವರನ್ನು ವಿರೋಧಿಸುವುದನ್ನು ತೊರೆದು ಹಿಂದುತ್ವದೆಡೆಗೆ ಮರಳಬೇಕಾಗುತ್ತದೆ. ಪೌರತ್ವ ಕಾನೂನಿನ ಕುರಿತು ಠಾಕರೆ ಅವರು ಜನವರಿ 23ರಂದು ತನ್ನ ನಿಲುವು ತಿಳಿಸಲಿದ್ದಾರೆ. 2006ರಲ್ಲಿ ಶಿವಸೇನೆ ಬಿಟ್ಟು ಎಂಎನ್‍ಎಸ್ ಸ್ಥಾಪಿಸಿದ ಬಳಿಕ ರಾಜ್ ಠಾಕರೆ ಹಿಂದುತ್ವವಾದವನ್ನು ಬಿಟ್ಟಿದ್ದರು. ಇದೇ ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ರಾಜ್ ಠಾಕರೆಯ ಎಂಎನ್‍ಎಸ್‍ನೊಳಗೆ ವಿರೋಧ ಇದೆ ಎನ್ನಲಾಗಿದೆ.

ಶಿವಸೇನೆಯನ್ನು ಕೈಬಿಟ್ಟು ಸಖ್ಯ ಮಾಡಿಕೊಳ್ಳುವುದಕ್ಕೆ ಎಂಎನ್‍ಎಸ್ 2014ರಲ್ಲಿ ಒಮ್ಮತಕ್ಕೆ ಬಂದಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವೀಣೆ ಬಳಿಕ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‍ಸಿಯನ್ನು ಕಡೆಗಣಿಸಿತ್ತು. ನಂತರ ರಾಜ್ ಠಾಕ್ರೆ ಮೋದಿ ಟೀಕಾಕಾರರಾಗಿದ್ದರು.