ಇಸ್ರೇಲಿನ ಅಥ್ಲೆಟ್‍ಗಳಿಗೆ ಮಲೇಶ್ಯದಲ್ಲಿ ಪ್ರವೇಶ ನಿರಾಕರಣೆ

0
582

ಕೌಲಾಲಂಪುರ: ಇಸ್ರೇಲಿನ ಅಥ್ಲೆಟ್‍ಗಳಿಗೆ ಮಲೇಶ್ಯಕ್ಕೆ ಪ್ರವೇಶವಿಲ್ಲ ಎಂದು ಪ್ರಧಾನಿ ಮುಹಾತೀರ್ ಮುಹಮ್ಮದ್ ಹೇಳಿದ್ದಾರೆ. ಇಸ್ರೇಲಿನ ಈಜು ತಂಡಕ್ಕೆ ಮಲೇಶ್ಯದ ವೀಸಾ ನಿರಾಕರಿಸಿ ಈ ರೀತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಜುಲೈ 25 ರಿಂದ ಮಲೇಶ್ಯದಲ್ಲಿ ವಿಶ್ವ ರಷ್ಯಾ ಒಲಿಂಪಿಕ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಡೆಯಲಿದ್ದು ಅದರಲ್ಲಿ ಭಾಗವಹಿಸಲಿಕ್ಕಿದ್ದ ತಂಡಕ್ಕೆ ಮಲೇಶ್ಯನ್ ಪ್ರಧಾನಿ ವೀಸಾ ನಿರಾಕರಿಸಿದ್ದಾರೆ. ನಾನು ನನ್ನ ತೀರ್ಮಾನದಲ್ಲಿ ದೃಢವಾಗಿದ್ದೇನೆ. ಕಾರ್ಯಕ್ರಮ ರದ್ದುಪಡಿಸುವುದು ಆಯೋ ಜಕರ ತೀರ್ಮಾನವಾದರೆ ಅವರಿಗೆ ಹಾಗೆ ಮಾಡಬಹುದು ಎಂದು ಮುಹಾತೀರ್ ಹೇಳಿದ್ದಾರೆ.

ವೀಸಾ ಕೊಡಬೇಕೆಂದು ಇಸ್ರೇಲಿನ ಒಲಿಂಪಿಕ್ ಕಮಿಟಿ ಮಲೇಶ್ಯದ ಮೇಲೆ ಒತ್ತಡ ಹಾಕಿತ್ತು. ಆದರೆ ಒಲಿಂಪಿಕ್ ಕಮಿಟಿಯ ಬೇಡಿಕೆಯನ್ನು ಮಲೇಶ್ಯಾ ತಿರಸ್ಕರಿಸಿದೆ. ಇಸ್ರೇಲಿನೊಂದಿಗೆ ಮಲೇಶ್ಯಾದ ತೀರ್ಮಾನ ಮತ್ತು ಫೆಲೆಸ್ತೀನಿಗೆ ಬೆಂಬಲ ಸೂಚಿಸಿ ಮುಹಾತೀರ್ ಈ ತೀರ್ಮಾನ ತಳೆದಿದ್ದಾರೆ ಎಂದು ವರದಿಯಾಗಿದೆ.