ಫ್ಯಾಕ್ಟ್ ಚೆಕ್ : ಮಹಾತ್ಮ ಗಾಂಧಿಯವರ ಅಹಿಂಸಾ ಮಂತ್ರವನ್ನು ರಾಹುಲ್ ಗಾಂಧಿ ಇಸ್ಲಾಂಗೆ ಹೋಲಿಸಿದರೆ?

0
776

ನಿಖಿಲ್ ದಾವರ್
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಮಹಾತ್ಮ ಗಾಂಧಿಯವರು ಅಹಿಂಸೆಯ ಪರಿ ಕಲ್ಪನೆಯನ್ನು ಇಸ್ಲಾಂನಿಂದ ಆಯ್ದುಕೊಂಡಿದ್ದಾರೆ ಎಂದು ದುಬೈ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆಯೇ?, ಇದು ನೇಷನ್ ವಿಥ್ ನಮೋ , ಪಿಎಂಒ ಇಂಡಿಯಾ : ಪೋಸ್ಟ್ ಕಾರ್ಡ್ ಮತ್ತು ಶಂಖ ನಾದದಂತಹ ಫೇಸ್ಬುಕ್ ಪುಟಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ರಾಹುಲ್ ಗಾಂಧಿ ಇತ್ತೀಚೆಗೆ ಯುಎಇಗೆ ಎರಡು ದಿನದ ಭೇಟಿ ನೀಡಿದ್ದರು.

ಇಂಡಿಯಾ ಟುಡೆ ಫ್ಯಾಕ್ಟ್ ಚೆಕ್ ಇದನ್ನು ದಾರಿತಪ್ಪಿಸುವ ಆರೋಪವೆಂದು ಕಂಡುಕೊಂಡಿದೆ. ದುಬೈಯ ಭಾರತೀಯ ವಲಸೆಗಾರರೊಂದಿಗಿನ ಅವರ ಸಂವಹನದಲ್ಲಿ, ರಾಹುಲ್ ಗಾಂಧಿಯವರು ಮಹಾತ್ಮ ಗಾಂಧಿಯವರ ಅಹಿಂಸೆಯ ಕಲ್ಪನೆಯನ್ನು ಇಸ್ಲಾಂ ಧರ್ಮದೊಂದಿಗೆ ಮಾತ್ರವಲ್ಲ, ಕ್ರಿಶ್ಚಿಯನ್ ಧರ್ಮ ಮತ್ತು ಜುದಾಯಿಸಂನಂತಹ ಇತರ ಧರ್ಮಗಳೊಂದಿಗೂ ಹೋಲಿಸಿದ್ದಾರೆ. ಈ ಪೋಸ್ಟ್ ಗಳನ್ನು 11,000 ಕ್ಕೂ ಹೆಚ್ಚು ಬಾರಿ ಹಂಚಲಾಗಿದೆ.

ಒಂಬತ್ತು ಸೆಕೆಂಡುಗಳ ವೀಡಿಯೋದಲ್ಲಿ, ಮಹಾತ್ಮ ಗಾಂಧಿಯವರು ಅಹಿಂಸೆಯ ಕಲ್ಪನೆಯನ್ನು ಇಸ್ಲಾಂ ಧರ್ಮದ ಪ್ರಾಚೀನ ಭಾರತೀಯ ತತ್ವಶಾಸ್ತ್ರದಿಂದ ಎತ್ತಿದರು ಎಂದು ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದು. ವೈರಲ್ ವೀಡಿಯೊದಲ್ಲಿ ಭಾಷಣದ ಉಳಿದ ಭಾಗವನ್ನು ಬಹಳ ಜಾಣತನದಿಂದ ಕತ್ತರಿಸಲಾಗಿದೆ.

ರಾಹುಲ್ ಗಾಂಧಿಯವರ ಪೂರ್ಣ ಭಾಷಣ ಕಾಂಗ್ರೆಸ್ ನ ಫೇಸ್ಬುಕ್ ಪುಟದಲ್ಲಿ ಲಭ್ಯವಿದೆ. ಮೂಲ ವಿಡಿಯೋದಲ್ಲಿ, ಇದು 27 ನಿಮಿಷಗಳು ಮತ್ತು 37 ಸೆಕೆಂಡುಗಳು ಉದ್ದವಾಗಿದೆ, ಅಹಿಂಸೆ ನಮ್ಮ ಡಿಎನ್ಎ ಯಲ್ಲಿ ಸೇರಿಕೊಂಡಿದೆ. ಅದು 50 ವರ್ಷಗಳವರೆಗೆ ಮಾತ್ರ ಸೇರಿಕೊಂಡಿರುವುದಲ್ಲ. ಮಹಾತ್ಮ ಗಾಂಧಿಯವರು ಅಹಿಂಸೆಯ ಬಹು ದೊಡ್ಡ ಪ್ರತಿಪಾದಕರಾಗಿದ್ದರು. ಆದರೆ ಮಹಾತ್ಮ ಗಾಂಧಿಯವರು ನಮ್ಮ ಮಹಾನ್ ಧರ್ಮಗಳಿಂದ ಅಹಿಂಸೆಯ ಕಲ್ಪನೆಯನ್ನು ಎತ್ತಿದರು, ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರದಿಂದ, ಇಸ್ಲಾಂ ಧರ್ಮದಿಂದ , ಕ್ರಿಶ್ಚಿಯನ್ ಧರ್ಮದಿಂದ, ಜುದಾಯಿಸಂನಿಂದ ಹಿಂಸಾಚಾರವು ಏನನ್ನೂ ಸಾಧಿಸಲು ಸಹಾಯ ಮಾಡುವುದಿಲ್ಲ ಎಂದು ಪ್ರತಿ ಮಹಾನ್ ಧರ್ಮಗಳು ಹೇಳಿವೆ ಎಂದು ಅವರು ಹೇಳಿದರು. ಅದನ್ನೇ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಹಾಗಾಗಿ , ರಾಹುಲ್ ಗಾಂಧಿಯವರ ವೀಡಿಯೋವು ಬಳಕೆದಾರರನ್ನು ತಪ್ಪುದಾರಿಗೆಳೆಯಲುಮಾಡಲಾದ ಕುಯುಕ್ತಿ ಎಂದು ಅರಿವಾಗುತ್ತದೆ. . ಹಿಂದೆ ಕೂಡ ರಾಹುಲ್ ಗಾಂಧಿಯನ್ನು ಇದೇ ರೀತಿ ಸುಳ್ಳಿನೊಳಗೆ ಸಿಲುಕಿಸಲು ಪ್ರಯತ್ನಿಸಲಾಗಿತ್ತು.