ಹೆಣ್ಮಗುವಿನ ಮೃತದೇಹ ಹೂಳಲು ಹೋದ ವ್ಯಕ್ತಿಗೆ ಮೊದಲೇ ಹೂತು ಹಾಕಿದ್ದ ಜೀವಂತ ಹೆಣ್ಮಗು ಸಿಕ್ಕಿತು!

0
825

ಸನ್ಮಾರ್ಗ ವಾರ್ತೆ

ಬರೇಲಿ,ಅ.14: ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದ ನವಜಾತ ಹೆಣ್ಣು ಶಿಶುವನ್ನು ದಫನ ಮಾಡಲು ಹೋದಾಗ ಜೀವಂತ ಹೂಳಲಾಗಿದ್ದ ಬೇರೊಂದು ಹೆಣ್ಣು ಮಗು ಹೂತ ಸ್ಥಿತಿಯಲ್ಲಿ ಸಿಕ್ಕಿದೆ. ಉತ್ತರಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು ಮಣ್ಣಿನಡಿ ಸಿಕ್ಕಿದ ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ.

ಹಿತೇಶ್ ಕುಮಾರ್ ಸಿರೋಹಿ ತನ್ನ ಮೃತ ಮಗುವನ್ನು ದಫನ ಮಾಡಲು ಸ್ಮಶಾನಕ್ಕೆ ಹೋಗಿದ್ದರು. ಮಗುವಿನ ಮೃತದೇಹ ಹೂಳಲು ಹೊಂಡ ತೆಗೆದಾಗ ಮಣ್ಣಿನ ರಾಶಿಯಲ್ಲಿ ಒಂದು ಹೆಣ್ಣುಮಗುವನ್ನು ಜೀವಂತ ಸ್ಥಿತಿಯಲ್ಲಿ ಹೂತಿರುವುದನ್ನು ಅವರು ನೋಡಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ತಂದು ಜೀವ ಉಳಿಸಿದ್ದಾರೆ.

ಈಗ ಮಗುವಿನ ಹೆತ್ತವರನ್ನು ಪತ್ತೆ ಹಚ್ಚಲು ಶ್ರಮಿಸಲಾಗುತ್ತಿದೆ ಎಂದು ಪೊಲೀಸ್ ಸುಪರಿಡೆಂಟೆಂಟ್ ಅಭಿನಂದನ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದು ಹಿತೇಶ್ ಪತ್ನಿ ಬರೇಲಿಯ ಎಸ್ಸೈ ವೈಶಾಲಿಗೆ ಬುಧವಾರ ಹೆರಿಗೆಯಾಗಿತ್ತು. ಅವಧಿ ಪೂರ್ವ ಹೆರಿಗೆಯಾದ್ದರಿಂದ ಅವರಿಗೆ ಜನಿಸಿದ ಹೆಣ್ಣುಮಗು ಮೃತಪಟ್ಟಿತ್ತು.

ಹೂಳಲ್ಪಟ್ಟಸಿಕ್ಕ ಮಗುವಿನ ಚಿಕಿತ್ಸೆಯ ಖರ್ಚುವೆಚ್ಚವನ್ನು ಬಿತಾರಿಯ ಶಾಸಕ ರಾಜೇಶ್ ಮಿಶ್ರ ವಹಿಸಿಕೊಂಡಿದ್ದಾರೆ ಎಂದು ಬರೇಲಿ ಮುಖ್ಯ ವೈದ್ಯಾಧಿಕಾರಿ ವಿನೀತ್ ಶುಕ್ಲ ಹೇಳಿದರು. ಹೆಚ್ಚು ಸೌಲಭ್ಯವಿರುವ ಬೇರೊಂದು ಆಸ್ಪತ್ರೆಗೆ ಶನಿವಾರ ದಾಖಲಿಸಲಾಯಿತು. ಮಗುವನ್ನು ಜೀವಂತ ಹೂತ ಘಟನೆಯ ಆರೋಪಿಗಳ ಪತ್ತೆಗೆ ತನಿಖೆ ಆರಂಭವಾಗಿದೆ.