ಎಪ್ಪತ್ತು ದಿನಗಳು ಸಂದರೂ ಸಾಮಾನ್ಯ ಸ್ಥಿತಿಗೆ ಮರಳದ ಕಾಶ್ಮೀರ!

0
524

ಸನ್ಮಾರ್ಗ ವಾರ್ತೆ

ಶ್ರೀನಗರ,ಅ.14: ವಿಶೇಷ ಸ್ಥಾನಮಾನ ರದ್ದುಪಡಿಸಿ ಎಪ್ಪತ್ತು ದಿನಗಳಾದರೂ ಕಾಶ್ಮೀರದ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಮುಖ್ಯ ಮಾರುಕಟ್ಟೆಗಳು, ಅಂಗಡಿಗಳು ನಿರ್ಜನವಾಗಿಯೇ ಮುಂದುವರಿಯುತ್ತಿದೆ.

ಟಿಆರ್‌ಸಿ ಚೌಕ್-ಲಾಲ್‍ ಚೌಕ್‍ ರಸ್ತೆಯಲ್ಲಿ ರವಿವಾರಗಳ ಸಂತೆ ಮಾತ್ರ ಕಾಶ್ಮೀರಿಗಳಿಗೆ ಇರುವ ಏಕ ಆಶ್ರಯವಾಗಿದೆ.ಆದ್ದರಿಂದ ಈ ಚೌಕ್‍ಗಳಲ್ಲಿ ಜನದಟ್ಟನೆ ಕಾಣಿಸುತ್ತಿದೆ.

ಚಳಿಗಾಲ ಹತ್ತಿರದಲ್ಲಿದ್ದು ಬಟ್ಟೆಗಳ ಸಹಿತ ಖರೀದಿಗೆ ಕಣಿವೆ ಜನ ಇಲ್ಲಿಗೆ ಬರುತ್ತಿದ್ದಾರೆ. ಆಟೋರಿಕ್ಷಾ, ಕೆಲವು ಟ್ಯಾಕ್ಸಿಗಳು ಓಡಾಡುತ್ತಿವೆ. ಆಗಸ್ಟ್ ನಾಲ್ಕರಿಂದ ಮೊಬೈಲ್ ಫೋನ್ ರದ್ದಾಗಿದ್ದು ಮರುಸ್ಥಾಪಿಸಲ್ಪಟ್ಟಿಲ್ಲ.

ಸೋಮವಾರ ಪೋಸ್ಟ್‌ಪೈಡ್ ಮೊಬೈಲ್ ಫೋನ್ ಪುನರಾರಂಭವಾಗಿದೆ. ಇಡೀ ಕಾಶ್ಮೀರದಲ್ಲಿ ಸಂಚರಿಸುವುದಕ್ಕಿದ್ದ ನಿಯಂತ್ರಣವನ್ನು ತೆರವುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಶ್ರೀನಗರದ ಹರಿಸಿಂಗ್ ಹೈಸ್ಟ್ರೀಟ್ ಮಾರ್ಕೆಟಿನಲ್ಲಿ ನಡೆದ ಗ್ರೆನೆಡ್ ದಾಳಿಯಿಂದ ವಿವಿಧ ಪ್ರದೇಶಗಳ ಸುರಕ್ಷೆ ಬಿಗಿಗೊಳಿಸಲಾಗಿದೆ. ಭಯೋತ್ಪಾದಕರ ದಾಳಿಯಲ್ಲಿ ಶನಿವಾರ ಏಳು ಮಂದಿ ಗಾಯಗೊಂಡಿದ್ದಾರೆ.