ಮಹಾರಾಷ್ಟ್ರ: ಸಿಬ್ಬಂದಿಯ ಮರ್ಮಾಂಗಕ್ಕೆ ಸ್ಯಾನಿಟೈಸರ್ ಸುರಿದ ಮಾಲಕನಿಂದ ಹಲ್ಲೆ

0
510

ಸನ್ಮಾರ್ಗ ವಾರ್ತೆ

ಪುಣೆ,ಜು.7: ಮಹಾರಾಷ್ಟ್ರದಲ್ಲಿ 30 ವರ್ಷದ ಮ್ಯಾನೇಜರ್‌ಗೆ ಮಾಲಕ ಮತ್ತು ಸಹಾಯಕರು ಸೇರಿ ಮರ್ಮಾಂಗಕ್ಕೆ ಸ್ಯಾನಿಟೇಸರ್ ಸುರಿದ ಘಟನೆ ನಡೆದಿದೆ. ಹಣದ ಕುರಿತ ಜಗಳದಲ್ಲಿ ಕೋಪಗೊಡ ಮಾಲಕ ಜೂನ್ 13 ಮತ್ತು14ನೇ ತಾರೀಕಿನಲ್ಲಿ ಯುವಕ ಕೆಲಸ ಮಾಡುವ ಕಂಪೆನಿಯ ಕಚೇರಿಯಲ್ಲಿ ದೌರ್ಜನ್ಯ ನಡೆಸಿದ್ದಾನೆಂದು ವರದಿಯಾಗಿದೆ. ಜುಲೈ 2 ರಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೆಲಸದ ವಿಷಯದಲ್ಲಿ ಯುವಕ ಕಳೆದ ಮಾರ್ಚ್‌ನಲ್ಲಕ ದಿಲ್ಲಿಗೆ ಹೋಗಿದ್ದ. ಲಾಕ್‍ಡೌನ್‌ನಿಂದಾಗಿ ಯುವಕ ಅಲ್ಲಿ ಸಿಕ್ಕಿಹಾಕಿಕೊಂಡಿದ್ದನು. ದಿಲ್ಲಿಯಲ್ಲಿ ಒಂದು ಲಾಡ್ಜ್‌ನಲ್ಲಿ ವಾಸಿಸಿದ ಯುವಕ, ಕಂಪೆನಿ ಕೊಟ್ಟ ಎಲ್ಲ ಹಣವನ್ನು ಖರ್ಚು ಮಾಡಿದ್ದಾನೆ.

ಮೇ ಏಳರಂದು ಪುಣೆಗೆ ಮರಳಿದ ಆತನಿಗೆ ಮಾಲಕ ಒಂದು ಹೊಟೇಲಿನಲ್ಲಿ 17 ದಿವಸ ಕ್ವಾರಂಟೈನಿನಲ್ಲಿ ಇರಲು ಸೂಚಿಸಿದ್ದಾನೆ. ಆದರೆ, ಬಿಲ್ ಪಾವತಿಗೆ ತನ್ನಲ್ಲಿ ಹಣವಿಲ್ಲದಾಗ ಹೊಟೇಲ್ ಕೋಣೆಯನ್ನು ತೆರವುಗೊಳಿಸಿದ್ದಾನೆ. ಕೊಡಲು ಹಣ ಇಲ್ಲದ್ದರಿಂದ ತನ್ನ ಫೋನ್, ಡೆಬಿಟ್ ಕಾರ್ಡನ್ನು ಅಲ್ಲಿ ಒತ್ತೆಯಿಟ್ಟಿದ್ದಾನೆ.

ಜೂನ್ 13ಕ್ಕೆ ಕಂಪೆನಿ ಮಾಲಕ ಮತ್ತು ಸಹಾಯಕರು ಆತನೊಂದಿಗೆ ಆತ ದಿಲ್ಲಿಯಲ್ಲಿ ಖರ್ಚು ಮಾಡಿದ ಹಣವನ್ನು ಕೊಡಬೇಕೆಂದು ಹೇಳಿದರು. ಅದಕ್ಕೊಪ್ಪದಾಗ ಈತನನ್ನು ಕಾರಿನಲ್ಲಿ ಹಾಕಿ ಕಚೇರಿಗೆ ತಂದರು. ಕಂಪೆನಿ ಮಾಲಕ ಮತ್ತು ಇತರ ಇಬ್ಬರು ಸೇರಿ ಯುವಕನಿಗೆ ಹಲ್ಲೆ ಮಾಡಿದ್ದಾರೆ. ಆತನ ಗುಂಪ್ತಾಂಗಗಳಿಗೆ ಸ್ಯಾನಿಟೈಸರ್ ಸುರಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಡೆದು ಅವನನ್ನು ಹೊರಗಟ್ಟಿದ ನಂತರ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಗುರುವಾರ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.