ಬಜಾಜ್ ಕಂಪೆನಿಯ ಯುನಿಟ್‍ನಲ್ಲಿ 250ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೊರೋನ ಸೋಂಕು: ಫ್ಯಾಕ್ಟರಿ ಬಂದ್ ಮಾಡುವಂತೆ ಸಿಬ್ಬಂದಿಗಳ ಮನವಿ

0
427

ಸನ್ಮಾರ್ಗ ವಾರ್ತೆ

ಮುಂಬೈ,ಜು.7: ಬಜಾಜ್ ಕಂಪೆನಿಯ ಯುನಿಟ್‍ನಲ್ಲಿ 250ಕ್ಕೂ ಹೆಚ್ಚು ಮಂದಿಗೆ ಕೊರೋನ ಸೋಂಕು ತಗುಲಿರುವ ಸ್ಥಿತಿಯಲ್ಲಿ ನಿರ್ಮಾಣ ಕಾರ್ಯಗಳನ್ನು ನಿಲ್ಲಿಸಬೇಕೆಂದು ಕಾರ್ಮಿಕರು ಬೇಡಿಕೆಯಿಟ್ಟಿದ್ದಾರೆ. ಭಾರತದ ಮುಂಚೂಣಿ ಮೊಟಾರು ಬೈಕ್ ರಫ್ತು ಮಾಡುವ ಕಂಪೆನಿ ಬಜಾಜ್ ಆಟೊ ಆಗಿದ್ದು, ಸಿಬ್ಬಂದಿಗೆ ಕೊರೋನದೃ ಢಪಟ್ಟಿರುವ ಹಿನ್ನೆಲೆಯಲ್ಲಿ ನಿರ್ಮಾಣ ಕೆಲಸ ಅರ್ಧದಷ್ಟು ಸ್ಥಗಿತವಾಗಿದೆ. ಹೆಚ್ಚು ಮಂದಿಗೆ ರೋಗ ಹರಡುವ ಸಾಧ್ಯತೆ ಇರುವುದರಿಂದ ನಿರ್ಮಾಣ ಘಟಕ ಮುಚ್ಚಲು ಕಾರ್ಮಿಕರು ಆಗ್ರಹಿಸಿದ್ದಾರೆ.

ಮಾರ್ಚಿನಲ್ಲಿ ದೇಶಾದ್ಯಂತ ಲಾಕ್‍ಡೌನ್‍ನಲ್ಲಿ ಸಡಿಲಿಕೆ ಆದ ಮೇಲೆ ಕೊರೊನಿಗರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳವಾಗಿದೆ. ಬೃಹತ್ ಕಂಪೆನಿಗಳಲ್ಲದೆ ಹಲವು ಸಣ್ಣ ವ್ಯಾಪಾರಿಗಳು ನಿರ್ಮಾಣ ಘಟಕವನ್ನು ನಿಲ್ಲಿಸಿದ್ದಾರೆ. ಅತ್ಯಂತ ಹೆಚ್ಚು ರೋಗ ಪೀಡಿತರಿರುವ ಮಹಾರಾಷ್ಟ್ರದಲ್ಲಿ ಬಜಾಜ್ ಆಟೋ ರೋಗ ವ್ಯಾಪನ ಹೆಚ್ಚಿಯೂ ಮುಚ್ಚಲು ಸಿದ್ಧವಾಗಿರಲಿಲ್ಲ.

ವೈರಸ್‍ನೊಂದಿಗೆ ಬದುಕಬೇಕಾಗಿದೆ. ಕೆಲಸ ಬರದವರಿಗೆ ಸಂಬಳ ಇಲ್ಲ ಎಂದು ಕಂಪೆನಿ ಪತ್ರ ಬರೆದಿತ್ತು. ಆದರೆ, ರೋಗದ ಹೆದರಿಕೆಯಿಂದ ಸಿಬ್ಬಂದಿಗಳು ಕೆಲಸಕ್ಕೆ ಬರಲು ಹೆದರುತ್ತಿದ್ದು, ಬಹಳಷ್ಟು ಮಂದಿ ರಜೆ ಪಡೆದಿದ್ದಾರೆ ಎಂದು ಬಜಾಜ್ ಆಟೊ ವರ್ಕರ್ಸ್ ಕಾರ್ಮಿಕರ ಯುನಿಟ್ ಅಧ್ಯಕ್ಷ ತೆಂಕಡೆ ಬಾಜಿರಾವು ಹೇಳಿದ್ದಾರೆ.

ಜೂನ್ 26ವರೆಗೆ 8000 ಉದ್ಯೋಗಿಗಳಲ್ಲಿ 140 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಬ್ಬರು ಮೃತಪಟ್ಟಿದ್ದಾರೆ ಎಂದು ಕಂಪೆನಿ ತಿಳಿಸಿದೆ. ಆದರೂ ತಾತ್ಕಾಲಿಕವಾಗಿ ಫ್ಯಾಕ್ಟರಿ ಮುಚ್ಚಲು ಕಂಪೆನಿ ಸಿದ್ಧವಾಗಿಲ್ಲ.

ಓದುಗರೇ, ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.