ಚೆನ್ನೈ,ಜು.13: ತಮಿಳ್ನಾಡಿನಲ್ಲಿ ದನದ ಮಾಂಸ ತಿಂದದ್ದಕ್ಕಾಗಿ ಮುಸ್ಲಿಂ ಯುವಕನಿಗೆ ಹಲ್ಲೆ ಮಾಡಲಾಗಿದೆ. ನಾಗಪಟ್ಟಣಂ ಪೊರವಚ್ಚೇರಿ ಮುಹಮ್ಮದ್ ಫೈಝಲ್(24) ಎಂಬವರಿಗೆ ಮುಖವಾಡ ಧರಿಸಿದ ಸಂಘಪರಿವಾರದ ಕಾರ್ಯಕರ್ತರು ಹೊಡೆದಿದ್ದಾರೆ. ಕಬ್ಬಿಣದ ರಾಡ್, ಕತ್ತಿಯಿಂದ ಥಳಿಸಲಾಗಿದ್ದು, ಹಲ್ಲೆಗೊಳಗಾದ ಫೈಝಲ್ರನ್ನು ನಾಗಪಟ್ಟಣಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಪಟ್ಟಣಂ ಜಿಲ್ಲಾ ಪೊಲೀಸ್ ಸುಪರಿಡೆಂಟ್ ಡಿ.ಕೆ. ರಾಜಶೇಖರನ್ರ ಸೂಚನೆಯ ಮೇರೆಗೆ ಸಂಘಪರಿವಾರದ ಕಾರ್ಯಕರ್ತರಾದ ದಿನೇಶ್ಕುಮಾರ್, ಎ. ಗಣೇಶ್ಕುಮಾರ್ ಮೋಹನ್ ಕುಮಾರ್, ಆರ್. ಅಗಸ್ಟಿಯನ್ರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಮೂರು ಮಂದಿ ಅಮ್ಮ ಮಕ್ಕಳ್ ಕಾರ್ಯಕರ್ತರು. ಓರ್ವ ವಿಡುದಲೈ ಶಿರುತೆಗಳು ಕಾರ್ಯಕರ್ತನಾಗಿದ್ದಾನೆ. ಆದರೆ ಇವರು ಹಿಂದೂ ಮಕ್ಕಳ್ ಕಾರ್ಯಕರ್ತರಾಗಿದ್ದು ತನಗೆ ಅವರ ಕಡೆಯಿಂದ ಮೊದಲಿನಿಂದಲೇ ಬೆದರಿಕೆ ಇತ್ತು ಎಂದು ಮುಹಮ್ಮದ್ ಫೈಝಲ್ ಪತ್ರಕರ್ತರಿಗೆ ತಿಳಿಸಿದ್ದಾನೆ. ಘಟನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.












