ಹೈದರಬಾದ್, ಜು.12: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಿರುವ ಟಿಕ್ ಟಾಕ್ ಆಪ್ಗಾಗಿ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ವೇಳೆ ಯುವಕ ನದಿಯಲ್ಲಿ ಮುಳು ಮೃತಪಟ್ಟಿದ್ದಾನೆ. ಹೈದರಾಬಾದಿನ ನರಸಿಂಹಲು (24) ಈ ಸಾಹಸಕ್ಕಿಳಿದು ಸಾವನ್ನು ಮೈಮೇಲೆ ಎಳೆದು ಕೊಂಡ ನತದೃಷ್ಟ ಆಗಿದ್ದಾನೆ.
ವೀಡಿಯೊ ಚಿತ್ರೀಕರಣದ ವೇಳೆ ಕಾಲು ಜಾರಿ ನದಿಯ ಆಳಕ್ಕೆ ಬಿದ್ದಿದ್ದ ಯುವಕ ಮತ್ತೆ ಮೇಲೆ ಎದ್ದಿಲ್ಲ. ವೀಡಿಯೊ ಚಿತ್ರಿಸುತ್ತಿದ್ದ ನರಸಿಂಹುಲು ದುರ್ಘಟನೆ ನಡೆದುದನ್ನು ಊರವರಿಗೆ ತಿಳಿಸಿದ್ದನು.












