ಇದನ್ನು ಬೆದರಿಕೆ ಅಂತ ತಿಳ್ಕೊಳ್ಳಿ, ಯಾ ಸಲಹೆ ಅಂತಾನೂ ತಿಳ್ಕೊಳ್ಳಿ; ಅಯೋಧ್ಯೆಯಲ್ಲಿ ಎಂದು ಮಸೀದಿ ಕಟ್ಟಲು ಸಾಧ್ಯವಿಲ್ಲ: ವೇದಾಂತಿ

0
524

ಅಯೋಧ್ಯೆ,ಜು.13: ರಾಮಜನ್ಮಭೂಮಿ ನ್ಯಾಸದ ಕಾರ್ಯಕಾರಿ ಅಧ್ಯಕ್ಷ ರಾಮವಿಲಾಸ್ ವೇದಾಂತಿ ಅಯೋಧ್ಯೆಯಲ್ಲಿ ಲಲ್ಲಾ ಇದ್ದಾನೆ. ಅಲ್ಲಿ ಜಗತ್ತಿನ ಯಾವುದೇ ಶಕ್ತಿಗೆ ಮಸೀದಿ ಕಟ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನು ಬೆದರಿಕೆ, ಧಮಕಿ ಅಥವಾ ಸಲಹೆಯೆಂದು ತಿಳಿಯಿರಿ. ಅಲ್ಲಿ ಮಸೀದಿ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೆಲವು ಉಗ್ರವಾದಿ ಮುಸ್ಲಿಮರನ್ನು ಹೊರತು ಪಡಿಸಿ ಎಲ್ಲ ಮುಸ್ಲಿಮರು ಅಲ್ಲಿ ರಾಮಮಂದಿರ ಕಟ್ಟಬೇಕೆಂದು ಬಯಸುತ್ತಿದ್ದಾರೆ ಎಂದು ವೇದಾಂತಿ ಹೇಳಿದರು.

ನಮ್ಮ ದೇಶ ಶಾಂತಿ ಮತ್ತು ಸದ್ಭಾವದಲ್ಲಿರಬಾರದೆಂದು ಪಾಕಿಸ್ತಾನ ಬಯಸುತ್ತಿದೆ. ಶಿಯಾ ವಕ್ಫ್ ಬೋಡ್ ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕೆಂದು ಹೇಳಿದೆ. ಅಯೋಧ್ಯೆಯಲ್ಲಿ ಮಂದಿರ ಮತ್ತು ಲಕ್ನೊದ ಶಿಯಾ ಬಹುಸಂಖ್ಯಾತರಿರುವಲ್ಲಿ ಮಸೀದಿ ನಿರ್ಮಾಣವಾಗಬೇಕೆಂದು ಅದು ಬಯಸುತ್ತಿದೆ ಎಂದು ವೇದಾಂತಿ ತಿಳಿಸಿದರು.

ಎಲ್ಲಿ ಹಿಂದೂಗಳು ಬಹುಸಂಖ್ಯಾತರಿದ್ದಾರೋ ಅಲ್ಲಿಯೇ ಮಂದಿರ ಕಟ್ಟಲು ಹಿಂದೂಗಳು ಕೋರ್ಟಿನಲ್ಲಿ ಮೊಕದ್ದಮೆ ನಡೆಸಬೇಕಾಗಿರುವುದು ವಿಪರ್ಯಾಸ. ದೇಶದ ಮುಸ್ಲಿಮರ ಮಂದಿರ ಕೆಡವಿರುವಲ್ಲೆಲ್ಲ ಮಂದಿರ ಕಟ್ಟಬೇಕೆಂದು ಹೇಳಬೇಕಾಗಿತ್ತು. ದೇಶದ ಮುಸ್ಲಿಮರು ಅಯೋಧ್ಯೆಯಲ್ಲಿ ಮಂದಿರ ಕಟ್ಟಿಸಲು ಮುಂದೆ ಬರಬೇಕೆಂದು ಅವರು ಹೇಳಿದರು.