ಮಲಪ್ಪುರಂ ಜಿಲ್ಲೆಯ ವಿರುದ್ಧ ಕೋಮು ಪ್ರಚೋದಕ ಹೇಳಿಕೆ: ಮೇನಕಾ ಗಾಂಧಿ ವಿರುದ್ಧ ವ್ಯಾಪಕ ಪ್ರತಿಭಟನೆ

0
673

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ,ಜೂ.6: ಮಲಪ್ಪುರಂ ಸಾರವೇ ಕೋಮುವಾದವಾಗಿದೆ ಎಂಬ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ದ್ವೇಷ ಪ್ರಚೋದಕ ಪೋಸ್ಟ್‌ಗಳು ಪ್ರಚಾರವಾಗುತ್ತಿದ್ದು ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.

ಕಳೆದ ದಿವಸ ಟ್ವಿಟ್‍ನಲ್ಲಿ ಪಾಲಕ್ಕಾಡಿನಲ್ಲಿ ಆನೆ ಸತ್ತ ಘಟನೆಗೆ ಸಂಬಂಧಿಸಿ ಅದು ಮಲಪ್ಪುರಂನಲ್ಲಿ ನಡೆದಿದೆ, ಅಲ್ಲಿರುವವರು ಆನೆಯನ್ನು ಮನಃಪೂರ್ವಕವಾಗಿ ಕೊಂದರೆಂಬ ರೀತಿಯಲ್ಲಿ ಮೇನಕಾ ಗಾಂಧಿ ಟ್ವೀಟ್ ಮಾಡಿದ್ದರು. ಟ್ವೀಟ್ ಹೊರ ಬಂದ ಬೆನ್ನಿಗೆ ಮೇನಕಾಗೆ ಉತ್ತರವಾಗಿ ಹಲವರು ಮುಂದೆ ಬಂದಿದ್ದಾರೆ. ಸ್ವಂತ ಕ್ಷೇತ್ರದ ಅಪರಾಧ ಕೃತ್ಯಗಳ ಲೆಕ್ಕ ತಿಳಿಯದೆ ಮೇನಕಾ ಮಲಪ್ಪುರಂಅನ್ನು ಮನಃಪೂರ್ವಕ ಅಪಕೀರ್ತಿಗೊಳಪಡಿಸಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ.

“ಇದನ್ನು ಒಪ್ಪಲು ಸಾಧ್ಯವಿಲ್ಲ. ಪ್ರಾಣಿಗಳ ಹೆಸರಿನಲ್ಲಿ ಮನುಷ್ಯನನ್ನು ಹೊಡೆದು ಕೊಲ್ಲುವಾಗ ಮೌನವಾಗಿದ್ದ ಈ ನಕಲಿ ಪ್ರಾಣಿ ಪ್ರೀಯರು ಒಂದು ವಿಭಾಗಕ್ಕೆ ಕಪ್ಪು ಮಸಿ ಬಳಿಯುತ್ತಿದ್ದಾರೆ” ಎಂದೂ ಟೀಕಿಸಲಾಗಿದೆ.

ಸಂಸದೆಯ ವಿರುದ್ಧ ಮಲಪ್ಪುರಂ ಯೂತ್ ಕಾಂಗ್ರೆಸ್, ಸಾಲಿಡಾರಿಟಿ ಯೂತ್ ಮೂವ್‍ಮೆಂಟ್ ಮತ್ತು ಇತರ ಸಂಘಟನೆಗಳು ದೂರು ನೀಡಿವೆ. ಮಳೆಯಾಳಂ ನಟಿ ಪಾರ್ವತಿ ಸಹಿತ ಹಲವರು ಮೇನಕಾ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಟಿಪ್ಪಣಿ ಮಾಡಿದ್ದಾರೆ.

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.