ಸನ್ಮಾರ್ಗ ವಾರ್ತೆ
ಮಂಗಳೂರು: ಕೆಎಂಸಿ ಬ್ಲಡ್ ಬ್ಯಾಂಕಿನ ಸಹಯೋಗದೊಂದಿಗೆ HIF ಇಂಡಿಯಾ ತನ್ನ 22ನೇ ರಕ್ತದಾನ ಶಿಬಿರವನ್ನು ನಗರದ ವಾಸ್ಲೇನ್ ನ ಮಸ್ಜಿದ್-ಉಲ್-ಎಹ್ಸಾನ್ ನಲ್ಲಿ ಆಯೋಜಿಸಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ HIF ಖತರ್ ಘಟಕದ ಅಧ್ಯಕ್ಷ ಶಾಹೀಮ್ ಸ್ವಯಂ ಪ್ರೇರಿತ ರಕ್ತದಾನದ ಮಹತ್ವದ ಕುರಿತು ಮಾತನಾಡಿದರು.

ಮಸ್ಜಿದ್-ಉಲ್-ಎಹ್ಸಾನ್ನ ಇಮಾಮ್ ಇನಾಯತ್ ಉಸ್ತಾದ್ ಅವರ ಪವಿತ್ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಆರಂಭವಾಯಿತು. HIF ಇಂಡಿಯಾ ಅಧ್ಯಕ್ಷ ಆದಿಲ್ ಫರ್ವೇಝ್ ಈ ಸಂದರ್ಭ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ದಾನಿಗಳಿಂದ ಒಟ್ಟು 140 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯವನ್ನು ಶಾಝ್ ರಶೀದ್ ನಿರೂಪಿಸಿದರು.













