ಮಂಗಳೂರು: ಹಾಸಿಗೆ ಪೀಡಿತರೊಂದಿಗೆ ಒಂದು ದಿನ: ಕೋಸ್ಟಲ್ ಫ್ರೆಂಡ್ಸ್ ನಿಂದ ವಿಭಿನ್ನ ಕಾರ್ಯಕ್ರಮ

0
304

ಸನ್ಮಾರ್ಗ ವಾರ್ತೆ

ಮಂಗಳೂರು: ಆರೋಗ್ಯದ ಸಮಸ್ಯೆ ಇರುವವರಿಗೆ ಆರ್ಥಿಕ ನೆರವು, ಅಗತ್ಯ ಸಾಧನಗಳ ಪೂರೈಕೆ ಮೊದಲಾದ ಸೇವೆಗಳನ್ನು ಸಾಮಾನ್ಯವಾಗಿ ಹೆಚ್ಚಿನ ಸಂಘ ಸಂಸ್ಥೆಗಳು ಮಾಡುತ್ತಿದೆ. ಆದರೆ ಮಂಗಳೂರಿನಲ್ಲೊಂದು ಸರಕಾರೇತರ ಸಂಸ್ಥೆ (NGO)ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷ್ಯವಹಿಸಿದೆ.

ಹಲವು ವರ್ಷಗಳಿಂದ ನಾಲ್ಕು ಗೋಡೆಗಳ ಮಧ್ಯೆ ಜೀವನ ಕಳೆಯುತ್ತಿದ್ದ ಹಾಸಿಗೆ ಪೀಡಿತ ರೋಗಿಗಳಿಗೆ ಒಂದು ದಿನದ ಮನರಂಜನಾ ಪ್ರವಾಸ ಹಮ್ಮಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕಳೆದ 5 ವರ್ಷಗಳಿಂದ ಮಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ‘ಕೋಸ್ಟಲ್ ಫ್ರೆಂಡ್ಸ್’ ಎಂಬ ಸಮಾನ ಮನಸ್ಕ ಯುವಕರ ತಂಡ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಹಲವು ಕಾರಣಗಳಿಂದ ಕಳೆದ ಹಲವು ವರ್ಷಗಳಿಂದ ಹಾಸಿಗೆ ಪೀಡಿತರಾಗಿರುವ ರೋಗಿಗಳನ್ನು ಆದಿತ್ಯವಾರ ಒಂದು ದಿನದ ಪ್ರವಾಸಕ್ಕೆ ಕರೆದೊಯ್ಯಲಾಗಿದೆ.

ಮಂಗಳೂರಿನಿಂದ ಪ್ರಾರಂಭಗೊಂಡ ಆರು ಮಂದಿ ಆಶಕ್ತರನ್ನೊಳಗೊಂಡ ಈ ಪ್ರವಾಸವು ಪ್ರಥಮವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತೆರಳಿದೆ. ಅಲ್ಲಿ ಸರೋವರ ಉದ್ಯಾನವನ, ಗುತ್ತಿನ ಮನೆ ಬಳಿಕ ಮೃಗಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ತನ್ನೀರುಬಾವಿ ಬೀಚ್ ಮತ್ತು ಸಂಜೆ ಮಾಲ್ ಒಂದಕ್ಕೆ ಕರೆದುಕೊಂಡು ಹೋಗಿ ಅವರನ್ನು ಖುಷಿ ಪಡಿಸಲಾಯಿತು.

‘ಕೋಸ್ಟಲ್ ಫ್ರೆಂಡ್ಸ್’ ತಂಡದ ಸದಸ್ಯರ ಜೊತೆಗೆ ವೈದ್ಯಕೀಯ ತಂಡವೂ ಹಾಸಿಗೆ ಪೀಡಿತರಿಗೆ ನೆರವಾಗಿತ್ತು.