ಸನ್ಮಾರ್ಗ ವಾರ್ತೆ
ಎಚ್ಐಎಫ್ ವತಿಯಿಂದ ಬದ್ರಿಯಾ ಫ್ರೆಂಡ್ಸ್ ದುಬೈ ಸಹಯೋಗದೊಂದಿಗೆ ಕರ್ನಾಟಕ-ಆಂಧ್ರ ಗಡಿಭಾಗದ ಅಬ್ದುಲ್ಲಾ ಸಾಬ್ ಬಸ್ತಿ ಎಂಬಲ್ಲಿ ನಿರ್ಮಾಣವಾದ ಸುಸಜ್ಜಿತ ನೂತನ ಮಸೀದಿಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೊಹಿದ್ದೀನ್ ಉಸ್ಮಾನ್ ಕಂದಕ್ರವರು ಉದ್ಘಾಟಿಸಿದರು. ಸ್ಥಳೀಯ ಖಾಜಿ ಮೌಲಾನ ರಿಯಾಜ್ ಅಹ್ಮದ್ ದುಆ ನೆರವೇರಿಸಿದರು. ಎಹ್ಸಾನ್ ಮಸೀದಿಯ ಕಾರ್ಯದರ್ಶಿ ಹನೀಫ್ ಪಿ.ಎಸ್, ಬಾವ ಉಳ್ಳಾಲ್, ಉದ್ಯಮಿ ತಸ್ಲಿಮ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಎಚ್.ಐ.ಎಫ್ ಅಧ್ಯಕ್ಷ ನಾಜಿಮ್ ಏ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸುಮಾರು 500ಕ್ಕೂ ಹೆಚ್ಚು ಜನರು ನಮಾಝ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಜುಮಾ ಮಸೀದಿ ಇದಾಗಿದ್ದು, ಬದ್ರಿಯಾ ಫ್ರೆಂಡ್ಸ್ ದುಬೈ ಮಸೀದಿಯ ನಿರ್ಮಾಣ ವೆಚ್ಚವನ್ನು ಭರಿಸಿದೆ. ಎಚ್.ಐ.ಎಫ್, ಎಂ.ಡಿ.ಪಿ ಮಸ್ತಿದ್ ಡೆವಲಪ್ಮೆಂಟ್ ಪ್ರಾಜೆಕ್ಟ್ ವತಿಯಿಂದ ನಿರ್ಮಿಸಲಾದ 7ನೇ ಮಸೀದಿ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.













