ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಇದಾರಾ ಅದಬ್-ಏ-ಇಸ್ಲಾಮಿ ಹಿಂದ್ ಬೀದರ್ ವತಿಯಿಂದ ಬಹುಭಾಷಾ ಕವಿಗೋಷ್ಠಿ

0
196

ಸನ್ಮಾರ್ಗ ವಾರ್ತೆ

ಬೀದರ್: ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಇದಾರಾ ಅದಬ್ ಏ ಇಸ್ಲಾಮಿ ಹಿಂದ್ ಬೀದರ ವತಿಯಿಂದ ಬೀದರ್‌ನ ನಿಝಾಮ್ ಫಂಕ್ಷನ್ ಪ್ಯಾಲೇಸ್‌ನಲ್ಲಿ “ಪ್ರವಾದಿ ಮುಹಮ್ಮದ್ (ಸ) ರ “ಜೀವನ ಮತ್ತು ಸಂದೇಶ” ವಿಷಯದ ಮೇಲೆ ಬಹುಭಾಷಾ ಕವಿಗೋಷ್ಠಿ ಏರ್ಪಡಿಸಲಾಯಿತು.

ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇದಾರಾ ಅದಬ್ ಎ ಇಸ್ಲಾಮೀ ಕರ್ನಾಟಕದ ರಾಜ್ಯಾಧ್ಯಕ್ಷರಾದ ಪ್ರೊ.ಸೈಯದ್ ಸಲೀಮ್ ದೌಲತ್ ಕೋಟಿ ಮಾತನಾಡುತ್ತಾ, ಅಲ್ಲಾಹನು ಮುಹಮ್ಮದ್(ಸ) ರನ್ನು ಪ್ರವಾದಿಯನ್ನಾಗಿ ನಿಯುಕ್ತಿ ಮಾಡಿ ಕಳುಹಿಸಿ ಮಾನವಿತೆಯ ಮೇಲೆ ಬಹುದೊಡ್ಡ ಉಪಕಾರ ಮಾಡಿದ್ದಾನೆ. ನಾವೆಲ್ಲ ಪ್ರವಾದಿಯಂತಹ ಅನುಗ್ರಹದ ಮಹತ್ವ ಅರಿತು ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜನರಿಗೆ ಕರೆ ನೀಡಿದರು. ಪ್ರವಾದಿಯವರಿಗೆ ನೀವು ನಷ್ಟ ಹೊಂದುವುದು ಅಸಹನೀಯವಾಗಿದೆ. ಅವರು ನಿಮ್ಮ ಯಶಸ್ಸಿಗಾಗಿ ಹಂಬಲಿಸುವವರಾಗಿದ್ದಾರೆ ಎಂದು ಹೇಳಿ ಮಾನವೀಯತೆಗೆ ಮಿಡಿಯುವ ಪ್ರವಾದಿ ಎಂದು ಬಣ್ಣಿಸಿದರು.

ಡಾ. ಎಂ.ಜಿ. ದೇಶಪಾಂಡೆಯವರು “ಅವರೇ ನಮ್ಮ ಮಹಾ ಪ್ರವಾದಿ ಮುಹಮ್ಮದರು”, ಶ್ರೀಮತಿ ಸಾಧನಾ ರಂಜೋಳಕರವರು “ಪ್ರವಾದಿ ಮುಹಮ್ಮದ್”, ಡಾ. ರಾಮಚಂದ್ರ ಗಣಾಪೂರ ಅವರು “ಭಾವೈಕ್ಯದ ಬೆಳಕು: ಪ್ರವಾದಿ ಮಹಮ್ಮದ್”, ಡಾ. ರಘುಶಂಖ ಭಾತಂಬ್ರಾ ಅವರು “ಮಹಾಪ್ರವಾದಿ” ಹಾಗೂ ಡಾ. ಮಹೇಶ್ವರಿ ಹೇಡೆಯವರು “ಮಹಾ ಪ್ರವಾದಿ” ಎನ್ನುವ ಶೀರ್ಷಿಕೆಯ ಕವನ ವಾಚನ ಮಾಡಿದರು.

ಮಹಮ್ಮದ್ ಕಮಾಲುದ್ದೀನ್ ಶಮೀಮ್, ಸೈಯದ್ ಜಮಿಲ ಅಹ್ಮದ ಹಾಷ್ಮಿ, ಸೈಫುದ್ದಿನ ಗೌರಿ ಸೈಫ್, ಮೀರ ಬಿದ್ರಿ, ಅಝಿಮ್ ಬಾದಷಾ, ರಹಮತುಲ್ಲಾ ಹರಮತ್, ಮುನವ್ವರ ಅಲಿ ಶಾಹೀದ, ಹಾಮೇದ ಸಲೀಮ್‌ರವರು ಉರ್ದು ಭಾಷೆಯಲ್ಲಿ ಕವನ ಪ್ರಸ್ತುತ ಪಡಿಸಿದರು.

ಸೈಯದ್ ಅಬ್ದುಲ್ ಸತ್ತಾರ್ ಅಧ್ಯಕ್ಷೀಯ ಭಾಷಣ ಮಾಡಿದರು, ಕವಿಗೋಷ್ಠಿಯ ಉದ್ಘಾಟನೆಯನ್ನು ದೇವವಾಣಿ ಪವಿತ್ರ ಕುರ್‌ಆನ್ ಪಠಣ ಹಾಗೂ ಉದ್ಬೋದೆಯ ಮೂಲಕ ಮಹಮ್ಮದ್ ನಿಝಾಮುದ್ದೀನ್ ಮಾಡಿದರು. ಕಾರ್ಯಕ್ರಮದ ಸಂಚಾಲನೆ ಅಸ್ಲಂ ಖಾದ್ರಿ ನಿರ್ವಹಿಸಿದರು.

ವರದಿ: ಮುಹಮ್ಮದ್ ನಿಝಾಮುದ್ದೀನ್