ಸನ್ಮಾರ್ಗ ವಾರ್ತೆ
ನವದೆಹಲಿ: ಎಂಬಿಬಿಎಸ್ ಅಧ್ಯಯನವನ್ನು ಹಿಂದಿಯಲ್ಲಿ ಜಾರಿಗೊಳಿಸುವ ಮಧ್ಯಪ್ರದೇಶ ಸರ್ಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ದೊಡ್ಡ ಧನಾತ್ಮಕ ಬದಲಾವಣೆಗೆ ಕಾರಣವಾಗಲಿದೆ ಮತ್ತು ವಿದ್ಯಾರ್ಥಿಗಳು ಅವರದೇ ಭಾಷೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
“ವೈದ್ಯಕೀಯ ಶಿಕ್ಷಣದ ಹೊಸ ಆರಂಭವು ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ಇದರೊಂದಿಗೆ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಅವರದೇ ಭಾಷೆಯಲ್ಲಿ ಕಲಿಯಲು ಸಾಧ್ಯವಾಗುವ ಜತೆಗೆ ಅವರಿಗೂ ಹಲವು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
मेडिकल शिक्षा के क्षेत्र में हुआ यह शुभारंभ देश में एक बड़ा सकारात्मक बदलाव लाने वाला है। इससे लाखों विद्यार्थी जहां अपनी भाषा में पढ़ाई कर सकेंगे, वहीं उनके लिए अवसरों के भी अनेक द्वार खुलेंगे। https://t.co/kuD9CErsPu
— Narendra Modi (@narendramodi) October 16, 2022
ಈಗಾಗಲೇ ಎಂಬಿಬಿಎಸ್ನ ಪ್ರಥಮ ವರ್ಷದ ಪಠ್ಯ ಪುಸ್ತಕದ ಹಿಂದಿ ಆವೃತ್ತಿಯನ್ನು ಮಧ್ಯಪ್ರದೇಶ ಸರಕಾರ ಹೊರತಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದಾರೆ. ಹಿಂದಿಯಲ್ಲಿ ಎಂಬಿಬಿಎಸ್ ಶಿಕ್ಷಣ ನೀಡುತ್ತಿರುವುದು ಐತಿಹಾಸಿಕ ದಿನವೆಂದು ಅಮಿತ್ ಶಾ ಹೇಳಿದ್ದಾರೆ. ಎಂಬಿಬಿಎಸ್ ಹಿಂದಿ ಆವೃತ್ತಿಯ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಮಧ್ಯಪ್ರದೇಶದ ಭೋಪಾಲದಲ್ಲಿ ನಡೆದಿತ್ತು.












