ಮಣಿಪುರ| ಕೋಮು ದಂಗೆ ಮುಗಿದಿಲ್ಲ; ಒಂಬತ್ತು ಮಂದಿ ಹತ್ಯೆ; ಹಲವು ಮಂದಿಗೆ ಗಾಯ

0
346

ಸನ್ಮಾರ್ಗ ವಾರ್ತೆ

ಇಂಫಾಲ, ಜೂ. 14: ಕೋಮು ಗಲಭೆ ಮಣಿಪುರದಲ್ಲಿ ಮುಂದುವರಿದಿದ್ದು ಮಂಗಳವಾರ ರಾತ್ರೆ ಗುಂಡು ಹಾರಾಟದಲ್ಲಿ ಒಬ್ಬಳು ಮಹಿಳೆ ಸಹಿತ ಒಂಬತ್ತು ಮಂದಿ ಕೊಲ್ಲಲ್ಪಟ್ಟರು. ಹಲವು ಮಂದಿ ಗಾಯಗೊಂಡಿದ್ದಾರೆ.

ಇಂಫಾಲ್ ಈಸ್ಟ್ ನ ಕಾಂಗ್‍ಪೊಕ್ಚಿ ಜಿಲ್ಲೆಯಲ್ಲಿ ಬರುವ ಗಡಿ ಗ್ರಾಮದಲ್ಲಿ ರಾತ್ರೆ ಹತ್ತು ಗಂಟೆಗೆ ಕೋಮು ದಂಗೆ ನಡೆದಿದೆ.

ಆಯುಧಾರಿಗಳ ತಂಡ ಅಗಿಜಾಂಗ್ ಗ್ರಾಮದಲ್ಲಿ ಗಲಭೆ ಎಬ್ಬಿಸಿತು. ಸುರಕ್ಷಾ ಸೇನೆ ಬರುವಷ್ಟರಲ್ಲಿ ದುಷ್ಕರ್ಮಿಗಳು ಯದ್ವಾ ತದ್ವಾ ಗುಂಡು ಹಾರಿಸಿದ್ದಾರೆ.

ಗಾಯಾಳುಗಳನ್ನು ಇಂಫಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ಗಲಭೆಗಳಾದಲ್ಲಿ ಅದರ ಹೊಣೆ ಅಸ್ಸಾಂ ರೈಫಲ್ಸ್ ಮೇಲಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದರು.

ಇಂಫಾಲದಲ್ಲಿ ಪ್ರಬಳ ಗೋತ್ರ ಮೇತಿ ಮತ್ತು ಕುಕಿ ವಿಭಾಗದ ನಡುವೆ ನಡೆದಿದ್ದ ಘರ್ಷಣೆ ಕೋಮು ಗಲಭೆಯಾಗಿ ಹೊತ್ತಿ ಉರಿಯುತ್ತಿದೆ. ಮೇತಿ ವಿಭಾಗಗಳಿಗೆ ಪರಿಶಿಷ್ಟ ವರ್ಗ ಸ್ಥಾನಮಾನ ನೀಡುವುದನ್ನು ಕುಕಿ ವಿಭಾಗ ವಿರೋಧಿಸುತ್ತಿದೆ.

ಗಲಭೆಯಲ್ಲಿ ಒಂದು ತಿಂಗಳಲ್ಲಿ 115 ಮಂದಿ ಮೃತಪಟ್ಟಿದ್ದಾರೆ. 40,000 ಮಂದಿ ಊರು ಬಿಟ್ಟು ಪಲಾಯನ ಮಾಡಿದ್ದಾರೆ.