ಮಾಂಸ ಮಾರುಕಟ್ಟೆಯಲ್ಲಿ 6 ಮಂದಿಗೆ ಕೊರೋನ; ಬಿಜಿಂಗ್‌ನಲ್ಲಿ ಪುನಃ ಲಾಕ್‍ಡೌನ್‍!

0
450

ಸನ್ಮಾರ್ಗ ವಾರ್ತೆ

ಬೀಜಿಂಗ್,ಜೂ.13: ಮಧ್ಯಂತರದ ಬಳಿಕ ಕೊರೋನ ಪ್ರಕರಣ ದೃಢಗೊಂಡಿದ್ದು, ಚೀನಾದ ರಾಜಧಾನಿ ಬೀಜಿಂಗಿನ ಹಲವು ಕಡೆಗಳಲ್ಲಿ ಪುನಃ ಲಾಕ್‍ಲಾಡ್ ಘೋಷಿಸಲಾಗಿದೆ. ಫಂಗ್ತಾತಯ್ ಜಿಲ್ಲೆಯ ಮಾಂಸ ಮಾರುಕಟ್ಟೆಯಲ್ಲಿ ಆರು ಮಂದಿಗೆ ಕೊರೋನ ಬಾಧಿಸಿದ್ದು ಪತ್ತೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇದರೊಂದಿಗೆ ಬೀಜಿಂಗ್‍ನ 11 ವಸತಿ ಸಮುಚ್ಚಯ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಜನರು ಮನೆಯನ್ನು ಬಿಟ್ಟು ಹೊರಗೆ ಬರುವುದನ್ನು ನಿಷೇಧಿಸಲಾಯಿತು. ಪ್ರದೇಶದಲ್ಲಿನ ಶಿಕ್ಷಣ ಕೇಂದ್ರಗಳನ್ನು ಮುಚ್ಚಲಾಗಿದೆ. ಎರಡು ತಿಂಗಳ ಬಳಿಕ ಬೀಜಿಂಗಿನಲ್ಲಿ ಹೊಸದಾಗಿ ಕೊರೋನಾ ರೋಗ ಕಂಡು ಬಂದಿದೆ ಎಂದು ವರದಿಯಾಗಿದೆ.ಚೀನಾದಲ್ಲಿ ಕಳೆದ ತಿಂಗಳು ಲಾಕ್‍ಡೌನ್ ನಿಯಂತ್ರಣಗಳನ್ನು ಹಿಂಪಡೆದುಕೊಳ್ಳಲಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.