ಸನ್ಮಾರ್ಗ ವಾರ್ತೆ
ಹ್ಯೂಸ್ಟನ್,ಅ.22: ಬಹಳ ಹಿಂದೆ ಮಂಗಳ ಗ್ರಹದಲ್ಲಿ ಉಪ್ಪಿನ ಸರೋವರಗಳಿದ್ದವು ಎಂಬ ಶೋಧವನ್ನು ದೃಢಪಡಿಸುವ ಹೊಸ ಅಧ್ಯಯನ ನಡೆದಿದ್ದು ಭೂಮಿಯಂತೆ ನೀರಿನಂಶ ಇರುವ ಸರೋವರಗಳು ನಂತರ ಬತ್ತಿಹೋಗಿವೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಕೆಂಪು ಗ್ರಹದ ವಾತಾವರಣ ಬತ್ತಿಹೋಗಿ ತುಂಬಾ ಕಾಲವೇ ಆಗಿದೆ ಎಂದು ಅಮೆರಿಕಾದ ಟೆಕ್ಸಾ ಐ ಆಂಡ್ ಎಂ ಯುನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ.
360 ಕೋಟಿ ವರ್ಷಗಳ ಹಿಂದೆ ಉಲ್ಕಾಪಾಥವಾಗಿ ಈ ಉಪ್ಪು ಸರೋವರ ಉಂಟಾಯಿತು ಎಂದು ನ್ಯಾಚುರಲ್ ಜಿಯೊ ಸಯನ್ಸ್ ಮಾಸಿಕದಲ್ಲಿ ಬರೆದ ಲೇಖನದಲ್ಲಿ ತಿಳಿಸಲಾಗಿದೆ. ಸರೋವರಗಳನ್ನು ಗೈಲ್ ಹೊಂಡಗಳೆಂದು ಹೆಸರಿಸಲಾಗಿದೆ.
2012ರಲ್ಲಿ ಮಂಗಳಕ್ಕೆ ಹೋದ ನಾಸಾದ ಬಾಹ್ಯಾಕಾಶ ನೌಕೆ ಕ್ಯೂರಿಯೊಸಿಟಿ ಉಪ್ಪು ತಟಾಕಗಳ ಕುರಿತು ಸೂಚನೆ ನೀಡಿತ್ತು. ಗೈಲ್ ಹೊಂಡದ ಬಳಿ ಕ್ಯೂರಿಯೊಸಿಟಿ ನೌಕೆ ಇಳಿದಿತ್ತು. 150 ಕಿಲೊ ಮೀಟರ್ ದೊಡ್ಡದಾದ ಹೊಂಡಗಳು ಒಂದು ಕಾಲದಲ್ಲಿ ಸರೋವರ ಆಗಿತ್ತು ಎಂದ ಸಂಶೋಧಕರು ಹೇಳಿದ್ದಾರೆ. ಮಳೆ, ಮಂಜು ಸುತ್ತಲೂ ಬಿದ್ದು ಅದು ಈ ಹೊಂಡದಲ್ಲಿ ಸಂಗ್ರಹಗೊಳ್ಳುತ್ತಿದ್ದವು ಎಂದು ತಿಳಿಸಲಾಗಿದೆ.
ನೀರಿನೊಂದಿಗೆ ಕೊಚ್ಚಿಕೊಮಡು ಬಂದ ಹೊಯ್ಗೆ ಕ್ರಮೇಣ ಹೊಂಡದಲ್ಲಿ ಸಂಗ್ರಹವಾಯಿತು. ನಂತರ ಮಂಗಳ ಗೃಹದಲ್ಲಿ ದೊಡ್ಡ ಬರ ಪರಿಸ್ಥಿತಿ ಉಂಟಾಯಿತು. ನೀರು ಬತ್ತಿ ಹೋಗುವ ಸಂದರ್ಭದಲ್ಲಿ ಉಪ್ಪು ನೀರಿನ ಸರೋವ ಆಗಿದ್ದವು. ಕ್ರಮೇಣ ಉಪ್ಪು ನೀರು ಬತ್ತಿ ಹೋಗಿ ಕಲ್ಲು, ಮರಳು ಮಾತ್ರ ಉಳಿದಿವೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.












