ಪಾಕ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದೇ ಭಾರತದೊಂದಿಗಿನ ಚರ್ಚೆಗೆ ಅಡ್ಡಿಯಾಗಿದೆ- ಅಮೆರಿಕ

0
427

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.22: ಭಾರತ-ಪಾಕಿಸ್ತಾನ ದ್ವಿ-ಪಕ್ಷೀಯ ಚರ್ಚೆಯಲ್ಲಿ ಭಾರತದ ವಾದವನ್ನು ಅಮೆರಿಕ ಪುರಸ್ಕರಿಸಿದೆ. ಗಡಿ ದಾಟಿ ಭಯೋತ್ಪಾದನೆಯನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ. ಇದುವೇ ಎರಡು ದೇಶಗಳ ನಡುವಿನ ಚರ್ಚೆಗೆ ಅಡ್ಡಿಯಾಗಿದೆ ಎಂದು ಅಮೆರಿಕ ಅಭಿಪ್ರಾಯ ಪಟ್ಟಿದೆ. ಆದರೆ ಭಾರತ-ಪಾಕ್ ನಡುವೆ ಚರ್ಚೆಯನ್ನು ತಾವು ಬೆಂಬಲಿಸುತ್ತೇವೆ ಎಂದು ಅಮೆರಿಕ ತಿಳಿಸಿದೆ.

1972ರ ಸಿಮ್ಲಾ ಒಪ್ಪಂದಂತೆ ಭಾರತ-ಪಾಕಿಸ್ತಾನ ಪರಸ್ಪರ ಸಮಸ್ಯೆಯನ್ನು ಪರಿಹರಿಸಲು ನೇರ ಚರ್ಚೆ ನಡೆಸುವುದು ಹೆಚ್ಚು ಫಲಪ್ರದ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.

ಮಧ್ಯಪ್ರಾಚ್ಯದ ಅಮೆರಿಕದ ಕಾರ್ಯಪ್ರವೃತ್ತ ಸಹ ಕಾರ್ಯದರ್ಶಿ ಅಲೀಸ್ ಜಿ.ವೆಲ್ಸ್ ಅವರು ಎರಡು ದೇಶಗಳ ನಡುವೆ ಅಷ್ಟಾಗಿ ದೊಡ್ಡ ಸಮಸ್ಯೆ ಇರಲಿಲ್ಲ. ಆದರೆ ಒಳ್ಳೆಯ ರೀತಿಯಲ್ಲಿ ಚರ್ಚೆ ಸಾಗಲು ಪರಸ್ಪರ ವಿಶ್ವಾಸದ ಅಗತ್ಯವಿದೆ ಎಂದು ಅವರು ಹೇಳಿದರು.

ಗಡಿಯಾಚೆ ಭಯೋತಾದನೆ ನಡೆಸುವ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುತ್ತಿದೆ ಇದು ಚರ್ಚೆಯ ಪ್ರಧಾನ ಅಡ್ಡಿಯಾಗಿದೆ. ಸ್ವಂತ ಭೂಮಿಯಲ್ಲಿ ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ದೃಢವಾಗಿ ಖಾಯಂ ಕ್ರಮಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.