ಟ್ರಂಪ್ ಕುರಿತು ಅಣ್ಣನ ಮಗಳು ಬರೆದ ಪುಸ್ತಕ ಮೊದಲ ದಿನವೇ ದಾಖಲೆಯ 9.5 ಲಕ್ಷ ಪ್ರತಿಗಳು ಮಾರಾಟ!

0
568

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಜು.18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಅವರ ಅಣ್ಣನ ಮಗಳು ಮೇರಿ ಟ್ರಂಪ್ ಬರೆದ “ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದಿ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’ ಎಂಬ ಪುಸ್ತಕವು ಬಿಡುಗಡೆಯಾದ ಮೊದಲ ದಿನವೇ 9.5 ಲಕ್ಷ ಪ್ರತಿಗಳನ್ನು ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದು ಪುಸ್ತಕ ಪ್ರಕಾಶನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜೊನಾಥನ್ ಕಾರ್ಪ್ ಗುರುವಾರ ತಿಳಿಸಿದ್ದಾರೆ.

ಈ ಪುಸ್ತಕವು ಟ್ರಂಫ್ ಕುಂಟುಂಬಸ್ಥರ ಹಳೆಯ ನೆನಪುಗಳನ್ನು ಒಳಗೊಂಡಿದ್ದು, ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಅಹಂಕಾರಿ ಹಾಗೂ ಅಜ್ಞಾನಿ ಎಂಬುದಾಗಿ ಮೇರಿ ಬಿಂಬಿಸಿದ್ದಾರೆ.

ಆಡಿಯೊ ಮತ್ತು ಡಿಜಿಟಲ್ ರೂಪಗಳು ಸೇರಿದಂತೆ 9,50,000 ಪ್ರತಿಗಳು ಮಂಗಳವಾರ ಮಾರಾಟವಾಗಿದ್ದು, ಇದು ಪ್ರಕಾಶನ ಸಂಸ್ಥೆಯಾದ ಸೈಮನ್ ಆ್ಯಂಡ್ ಶಸ್ಟರ್ ನ ದಾಖಲೆಯಾಗಿದೆ ಎಂದು ಪ್ರಕಾಶನ ಸಂಸ್ಥೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಪುಸ್ತಕವು ಸುಳ್ಳುಗಳ ಕಂತೆಯೆಂದು ಎಂಬುದಾಗಿ ಶ್ವೇತಭವನವು ಬಣ್ಣಿಸಿದೆ ಎಂದು ವರದಿಯಾಗಿದೆ.

ಬೇಡಿಕೆ ಹೆಚ್ಚುತ್ತಿರುವ ನಿಟ್ಟಿನಲ್ಲಿ ಅಮೆರಿಕದ ಮಾರುಕಟ್ಟೆಯೊಂದಕ್ಕೆ 11.5 ಲಕ್ಷ ಪ್ರತಿಗಳನ್ನು ಮೀಸಲಿರಿಸಿದೆ. ಕೆನಡ ಮತ್ತು ಆಸ್ಟ್ರೇಲಿಯಗಳ ಅಮೆಝಾನ್ ಆನ್‌ಲೈನ್ ಸೇಲ್ಸ್‌ನ ಮಾರಾಟ ಪಟ್ಟಿಯಲ್ಲಿಯೂ ಪುಸ್ತಕವು ಅಗ್ರ ಸ್ಥಾನದಲ್ಲಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.