ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಸೆ.12: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ “ನವೋತ್ಥಾನ ಮೌಲ್ಯ ಸಂರಕ್ಷಣಾ ಸಮಿತಿ” ವಿಭಜನೆಯೆಡೆಗೆ ಸಾಗಿದೆ.
ನವೋತ್ಥಾನ ಸಮಿತಿಯ ಜಂಟಿ ಸಂಚಾಲಕ ಸಿಪಿ ಸುತನ್ರ ನೇತೃತ್ವದ ಹಿಂದೂ ಪಾರ್ಲಿಮೆಂಟ್ ಸಮಿತಿಯಿಂದ ಹೊರ ಹೋಗಲು ನಿರ್ಧರಿಸಿದೆ. ತಮ್ಮ ಜೊತೆ 54 ಸಂಘಟನೆಗಳಿವೆ ಎಂದು ಹಿಂದೂ ಪಾರ್ಲಿಮೆಂಟ್ ಹೇಳಿದೆ. ವಿಶಾಲ ಹಿಂದೂ ಐಕ್ಯಕ್ಕೆ ನವೋತ್ಥಾನ ಸಮಿತಿ ಅಡ್ಡಿಯಾಗಿದೆ. ಆದ್ದರಿಂದ ಸಮಿತಿಯಿಂದ ಹೊರಹೋಗುವ ಕುರಿತು ನಿರ್ಧರಿಸಲಾಯಿತೆಂದು ಮುಖ್ಯಮಂತ್ರಿಗೆ ಹಿಂದೂ ಪಾರ್ಲಿಮೆಂಟ್ ತಿಳಿಸಿದೆ.
ನವೋತ್ಥಾನ ಮೌಲ್ಯ ಸಂರಕ್ಷಣಾ ಸಮಿತಿ ಮೀಸಲಾತಿ ಒಕ್ಕೂಟ ಮಾತ್ರವಾಗಿದೆ. ಅದು ನವೋತ್ಥಾನದ ಕೆಲಸಗಳನ್ನು ಈಗ ಮಾಡುತ್ತಿಲ್ಲ ಎಂದು ಹಿಂದೂ ಪಾರ್ಲಿಮೆಂಟ್ ಆರೋಪಿಸಿತು. ಸಮಿತಿ ಕನ್ವೀನರ್ ಪುನ್ನಲ ಶ್ರೀಕುಮಾರ್ರೊಂದಿಗಿನ ಭಿನ್ನಮತ ಹಿಂದೂ ಪಾರ್ಲಿಮೆಂಟ್ ಸಮಿತಿಯಿಂದ ಹೊರ ಬರಲು ಕಾರಣ ಎನ್ನಲಾಗುತ್ತಿದೆ.












