ದೆಹಲಿ; ಕೊರೋನಾ ಚಿಕಿತ್ಸೆಗಾಗಿ ತನ್ನ ಮೆಡಿಯೂರ್ ಆಸ್ಪತ್ರೆಯನ್ನೇ ಸರಕಾರಕ್ಕೆ ಉಚಿತವಾಗಿ ನೀಡಿದ ಶಂಶೀರ್

0
2348

ಸನ್ಮಾರ್ಗ ವಾರ್ತೆ

ನವದೆಹಲಿ, ಮಾರ್ಚ್ 28 -ಕೊರೋನಾವನ್ನು ತಡೆಯುವುದಕ್ಕೆ ದೇಶ ಹರಸಾಹಸ ಪಡುತ್ತಿರುವಾಗಲೇ ಮತ್ತು ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕುರಿತಂತೆ ಚಿಂತಿತವಾಗಿರುವ ಸಂದರ್ಭದಲ್ಲೆ ದೆಹಲಿಯ ಮನೇಸರ್ ನಲ್ಲಿರುವ ಸಂಶೀರ್ ಅವರ ಮಾಲಕತ್ವದ ಮೆಡಿಯೂರ್ ಆಸ್ಪತ್ರೆಯು ಇಡೀ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗಾಗಿ ಉಚಿತವಾಗಿ ನೀಡುವುದಾಗಿ ದೆಹಲಿ ಸರಕಾರಕ್ಕೆ ಪತ್ರ ಬರೆದಿದೆ.

ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ಉಚಿತವಾಗಿ ಬಳಸಿಕೊಳ್ಳಬಹುದು ಎಂದು ಆಸ್ಪತ್ರೆಯ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುತಂ ಅವರು ಪತ್ರ ಬರೆದಿದ್ದಾರೆ.

ಈ ಮೆಡಿಕಲ್ ಆಸ್ಪತ್ರೆಗೆ ದೆಹಲಿಯಲ್ಲಿ 3 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಕ್ರಿಟಿಕಲ್ ಕೇರ್, ಐಸೋಲೇಶನ್ ಕೊಠಡಿಗಳು, ವೆಂಟಿಲೇಟರ್ ಗಳು ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳು ಮನೇಸರ್ ನಲ್ಲಿರುವ ಈ ಆಸ್ಪತ್ರೆಯಲ್ಲಿ ಇದೆ.

ಕೊರೋನಾಕ್ಕೆ ಚಿಕಿತ್ಸೆ ನೀಡುವುದಕ್ಕಾಗಿಯೇ ವೈದ್ಯರು, ದಾದಿಯರು, ಆರೋಗ್ಯ ತಜ್ಞರು ಸಹಿತ ಒಂದು ತಜ್ಞ ತಂಡವನ್ನು ಆಸ್ಪತ್ರೆಯು ರಚಿಸಿದ್ದು, ಸರಕಾರದ ತಜ್ಞರು ಆಸ್ಪತ್ರೆಗೆ ಶೀಘ್ರ ಭೇಟಿಕೊಟ್ಟು ಸೌಲಭ್ಯಗಳನ್ನು ಪರಿಶೀಲಿಸಬೇಕು ಎಂದು ಆಸ್ಪತ್ರೆಯ ಸಿಇಓ ನಿಹಾರ್ ಮುಹಮ್ಮದ್ ಅವರು ಹೇಳಿದ್ದಾರೆ. ಕೇರಳದಲ್ಲಿ ನಿಫಾ ವೈರಸ್ ಭೀತಿಯನ್ನುಂಟು ಮಾಡಿದಾಗ ಕೇರಳ ಸರಕಾರಕ್ಕೆ ನೆರವು ನೀಡಿದವರಲ್ಲಿ ಈ ವಿಪಿಎಸ್ ಗ್ರೂಪ್ ಬಹಳ ಮುಂಚೂಣಿಯಲ್ಲಿತ್ತು.