ಟ್ವಿಟ್ಟರ್ ಪ್ರೊಫೈಲ್‌ನಲ್ಲಿ ‘ಆಂದೋಲನ್ ಜೀವಿ’ ಎಂದು ಬರೆದುಕೊಂಡ ಹೋರಾಟಗಾರ್ತಿ ಮೀನಾ ಕಂದಸ್ವಾಮಿ

0
403

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಟ್ವಿಟರ್ ಪ್ರೊಫೈಲ್‍ನಲ್ಲಿ ಹೆಸರಿನ ಮುಂದೆ ‘ಆಂದೋಲನ್ ಜೀವಿ’ ಎಂಬ ಹೆಸರನ್ನು ಆಕ್ಟಿವಿಸ್ಟ್ ಬರಹಗಾರ್ತಿ ಮೀನಾ ಕಂದಸ್ವಾಮಿ ಸೇರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪ್ರತಿಭಟನಾಕಾರರನ್ನು ಆಂದೋಲನ್ ಜೀವಿ ಎಂದು ವ್ಯಂಗ್ಯವಾಡಿದ್ದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ಜವಾಬು ನೀಡುವ ಭಾಷಣದ ಬಳಿಕ ಕೃತಜ್ಞತಾ ಸೂಚಕ ಗೊತ್ತುವಳಿಯಲ್ಲಿ ಮೋದಿ ರೈತರನ್ನು ವ್ಯಂಗ್ಯವಾಡಿದ್ದರು. ದೇಶದಲ್ಲಿ ಹೊಸ ಒಂದು ವಿಭಾಗ ಆಂದೋಲನ ಜೀವಿಗಳು ರೂಪುಗೊಂಡಿದೆ ಎಂದು ಮೋದಿ ಹೇಳಿದ್ದರು. ಎಲ್ಲ ಪ್ರತಿಭಟನೆಗಳಲ್ಲೂ ಇವರನ್ನು ಕಾಣಬಹುದು. ಆಂದೋಲನ್ ಜೀವಿ ಎಂದು ಇವರ ಹೆಸರು. ಇವರು ಪರಾನ್ನಭೋಜಿಗಳು ಎಂದು ಮೋದಿ ಹೇಳಿದರು.

ಬುದ್ಧಿಜೀವಿ ಎಂದೆಲ್ಲ ಕೇಳಿದ್ದೇನೆ. ಕೆಲವು ಕಾಲದಿಂದ ದೊಡ್ಡ ವಿಭಾಗವೊಂದು ರೂಪುಗೊಂಡಿದೆ. ಆಂದೋಲನ್ ಜೀವಿ. ಈ ವಿಭಾಗದವರನ್ನು ಎಲ್ಲ ಕಡೆಯೂ ಕಾಣಬಹುದು. ವಕೀಲರ ಹೋರಾಟ. ವಿದ್ಯಾರ್ತಿಗಳ ಹೋರಾಟ, ಕಾರ್ಮಿಕರ ಹೋರಾಟ ಇವುಗಳಲ್ಲಿ ಮುಂದೆ ಅಥವಾ ಹಿಂದೆ ಇವರನ್ನು ಕಾಣಬಹುದು. ಅವರಿಗೆ ಹೋರಾಟವಿಲ್ಲದೆ ಜೀವಿಸಲು ಆಗುವುದಿಲ್ಲ. ಅಂತಹ ಜನರನ್ನುಗುರುತಿಸಿ ಅವರಿಂದ ದೇಶವನ್ನು ರಕ್ಷಿಸಬೇಕು. ಅವರು ಪರಾನ್ನಭೋಜಿಗಳು ಎಂದು ಹೇಳಿದರು.

ಮೋದಿಯವರ ಹೇಳಿಕೆಯನ್ನು ವಿರೋಧಿಸಿ ರೈತ ಸಂಘಟನೆಗಳು ರಂಗಪ್ರವೇಶಿಸಿದೆ. ಬ್ರಿಟಿಷರ ವಿರುದ್ಧ ಬಿಜೆಪಿ, ಅವರ ಹಿರಿಯರು ಹೋರಾಡಿಲ್ಲ . ಕೆಲವೊಮ್ಮೆ ಹೋರಾಟದ ವಿರುದ್ಧ ನಿಂತಿದ್ದರು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ತಿಳಿಸಿತು.