ಕಾಂಕ್ರೀಟ್ ಮಿಕ್ಸರ್‌ನ ಒಳಗೆ ಕುಳಿತು ಊರಿಗೆ ಮರಳಲು ಯತ್ನಿಸಿದ 18 ಕಾರ್ಮಿಕರು ಕರುಣಾಜನಕ ಕತೆ- ವಿಡಿಯೋ

0
1132

ಸನ್ಮಾರ್ಗ ವಾರ್ತೆ

ಇಂದೋರ್:ಕರೋನಾ ವೈರಸ್ ಲಾಕ್‌ಡೌನ್ ಮಧ್ಯೆ ಉತ್ತರ ಪ್ರದೇಶದ ಲಕ್ನೋಗೆ ಮರಳಲು ಹತಾಶರಾಗಿರುವ 18 ವಲಸೆ ಕಾರ್ಮಿಕರು ಇಂದು ಬೆಳಿಗ್ಗೆ ಮಧ್ಯಪ್ರದೇಶದ ಹೆದ್ದಾರಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಒಳಗೆ ಕುಳಿತಿರುವುದು ಕಂಡು ಬಂದಿದೆ‌.

 

 

ರಾಜ್ಯದ ಇಂದೋರ್ ಮತ್ತು ಉಜ್ಜಯಿನಿ ಜಿಲ್ಲೆಗಳ ಗಡಿಯಲ್ಲಿ ಬೀಡು ಬಿಟ್ಟಿರುವ ಪೊಲೀಸ್ ಅಧಿಕಾರಿಗಳು ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಜನರ ಅಕ್ರಮ ಸಂಚಾರವನ್ನು ಪರೀಕ್ಷಿಸಲು ಟ್ರಕ್ ಅನ್ನು ನಿಲ್ಲಿಸಿದರು. ಟ್ರಕ್ ಚಾಲಕನ ಭಯಭೀತ ಪ್ರತಿಕ್ರಿಯೆಯಿಂದ ಎಚ್ಚೆತ್ತುಕೊಂಡ ಪೊಲೀಸರು, ನಿರ್ಮಾಣ ಚಟುವಟಿಕೆಗಳಿಗೆ ಕಾಂಕ್ರೀಟ್ ಉತ್ಪಾದಿಸಲು ದೊಡ್ಡ ಪ್ರಮಾಣದ ಸಿಮೆಂಟ್ ಮತ್ತು ಇತರ ವಸ್ತುಗಳನ್ನು ಬೆರೆಸಲಾಗು ಬೃಹತ್ ಡ್ರಮ್ ಅನ್ನು ಪರಿಶೀಲಿಸಿದರು. ಅವರ ಆಘಾತಕ್ಕೆ, ಅವರು ಮುಚ್ಚಳವನ್ನು ತೆರೆದಾಗ 18 ಪುರುಷರು ಒಳಗೆ ಕುಳಿತಿರುವುದು ಕಂಡು ಬಂತು.

ಘಟನೆಯ ವೀಡಿಯೊವೊಂದು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿರುವ ಕಾಂಕ್ರೀಟ್ ಮಿಕ್ಸರ್ನ ಕಿರಿದಾದ ರಂದ್ರವನ್ನು ತೆರೆದಾಗ ಒಬ್ಬೊಬ್ಬರಾಗಿ ವಲಸೆ ಕಾರ್ಮಿಕರು ತಮ್ಮ ಕೆಲವು ವಸ್ತುಗಳನ್ನು ಒದ್ದೆಯಾದ ಬಟ್ಟೆಯ ಚೀಲಗಳನ್ನು ಹಿಡಿದು ಡ್ರಮ್‌ನಿಂದ ಇಳಿಯುವ ಕರುಣಾಜನಕ ಸ್ಥಿತಿ ಕಂಡು ಬಂತು.

ಎಫ್‌ಐಆರ್ ನೋಂದಾಯಿಸಿ ಟ್ರಕ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದು, ವಲಸಿಗರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುದು ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಪ್ರಸ್ತುತ ಬಸ್ ಮೂಲಕ ಲಕ್ನೋಗೆ ಸಾಗಿಸಲು ವ್ಯವಸ್ಥೆ ಮಾಡುತ್ತಿದೆ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ