ಅಮೇರಿಕಾದಲ್ಲಿ 1.1 ಮಿಲಿಯನ್ ದಾಟಿದ ಕೋವಿಡ್ -19 ಪ್ರಕರಣಗಳ : ಜಾನ್ಸ್ ಹಾಪ್ಕಿನ್ಸ್ ವಿವಿ ವರದಿ

0
621

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್, ಮೇ 2 (ಐಎಎನ್‌ಎಸ್): ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಪ್ರಕಾರ, ಅಮೆರಿಕಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ (ಶುಕ್ರವಾರ) ಸಂಜೆ 7.40ರ ವೇಳೆಗೆ 1,100,197 ದಾಟಿದೆ. ಹಾಗೂ ದೇಶದಲ್ಲಿ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 64,789ಕ್ಕೆ ತಲುಪಿದೆ ಎಂದು ವರದಿ ಮಾಡಿದೆ.

ನ್ಯೂಯಾರ್ಕ್ ಅತಿ ಹೆಚ್ಚು ಕೊರೋನಾ ಸೋಂಕು ಪೀಡಿತ ರಾಜ್ಯವಾಗಿ ಉಳಿದಿದೆ. 308,314 ಪ್ರಕರಣಗಳು ಮತ್ತು 24,039 ಸಾವುಗಳು ಸಂಭವಿಸಿವೆ, ನ್ಯೂಜೆರ್ಸಿಯಲ್ಲಿ 121,190 ಪ್ರಕರಣಗಳು ಮತ್ತು 7,538 ಸಾವುಗಳು ಸಂಭವಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಎಸ್ಎಸ್ಇ ಪ್ರಕಾರ, 50,000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ಮ್ಯಾಸಚೂಸೆಟ್ಸ್, ಇಲಿನಾಯ್ಸ್ ಮತ್ತು ಕ್ಯಾಲಿಫೋರ್ನಿಯಾ ಸೇರಿವೆ.

ಓದುಗರೇ, sanmarga ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.