ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿಯಂತ್ರಣವಿರಲಿ: ಎಸ್‌.ಬಿ ದಾರಿಮಿ ಕರೆ

0
213

ಸನ್ಮಾರ್ಗ ವಾರ್ತೆ

ಮಂಗಳೂರು: ಅಝಾನ್ ಮೊಳಗಿಸುವ ಉದ್ದೇಶದಿಂದ ಮಸೀದಿಗಳಿಗೆ ಅಳವಡಿಸಲಾಗಿರುವ ಲೌಡ್ ಸ್ಪೀಕರ್‌ಗಳನ್ನು ಬೇಕಾಬಿಟ್ಟಿ ಬಳಸದಂತೆ ಆಡಳಿತ ಸಮಿತಿಯವರು ವಿಶೇಷ ಗಮನ ಹರಿಸಬೇಕಾಗಿದೆ ಎಂದು  ದ.ಕ.ಜಿಲ್ಲಾ ಜಂಇಯ್ಯತುಲ್ ಖುತ್ಪಾ (ಇಮಾಮರುಗಳ ಒಕ್ಕೂಟದ ಅಧ್ಯಕ್ಷರಾದ ಮೌಲಾನಾ ಎಸ್‌‌.ಬಿ ದಾರಿಮಿಯವರು ಕರೆ ನೀಡಿದ್ದಾರೆ.

ಮಸೀದಿ ಸುತ್ತಮುತ್ತಲಿನ ಜನರ ನಿದ್ದೆಗೆ ತೊಂದರೆಯಾಗುವ ರೀತಿಯಲ್ಲಿ ಬೆಳಗಿನ ಜಾವ ಕೆಲವು ಮಸೀದಿಗಳಿಂದ ಸಹರಿಗೆ ಎದ್ದೇಳಲು ಧ್ವನಿವರ್ಧಕದ ಮೂಲಕ ಕರೆ ನೀಡಲಾಗುತ್ತಿದೆ. ಆದರೆ ಇಂದಿನ ಅತ್ಯಾಧುನಿಕ ಸೌಕರ್ಯಗಳಿರುವ ಕಾಲದಲ್ಲಿ ಇದರ ಅಗತ್ಯತೆ ಇಲ್ಲದ ಕಾರಣ ಇದಕ್ಕೆ ನಿಯಂತ್ರಣ ಹೇರಬೇಕಾದ ಅಗತ್ಯತೆ ಇದೆ. ಅದೇ ರೀತಿ ಅಝಾನ್ ಅಲ್ಲದ ಇತರ ಕಾರ್ಯಕ್ರಮಗಳನ್ನು ಕೂಡಾ ಮಸೀದಿಯ ಒಳಗೆ ಮಾತ್ರ ಕೇಳಿಸುವಂತೆ ಸೀಮಿತ ವಲಯಕ್ಕೆ ಮೈಕ್ ಬಳಸಿಕೊಳ್ಳಲು ಮುಂದಾಗಬೇಕಿದೆ. ಈ ವಿಷಯದಲ್ಲಿ ಮಸೀದಿಯ ಇಮಾಮರು ಜನರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ.