ರಮಝಾನ್ ಎಂಬ ಸ್ವರ್ಗದ ಅತಿಥಿ

0
354

ರೈಹಾನ್ ವಿ. ಕೆ. ಸಚ್ಚೇರಿಪೇಟೆ

ಈಗಾಗಲೇ ನಮ್ಮ ನಿಮ್ಮೆಲ್ಲರ ಮನೆಗೆ ರಮಝಾನ್ ಎಂಬ ಸ್ವರ್ಗದ ಅತಿಥಿ ಪ್ರವೇಶಗೊಂಡಾಗಿದೆ. ನಮ್ಮ ನಿಮ್ಮೆಲ್ಲರನ್ನು ಸ್ವರ್ಗಕ್ಕೆ ಕರೆಯದೊಯ್ಯಲು ಬಂದಿರುವ ಕಾರುಣ್ಯವೆಂಬ ಅತಿಥಿ. ಆದ್ದರಿಂದ ಈ ರಮಝಾನ್ ಎಂಬ ಅತಿಥಿಗೆ ಒಂದು ಅಸ್ತಿತ್ವವನ್ನು ಕಲ್ಪಿಸಿ, ಒಂದು ಅತಿಥಿ ಮನೆಯಲ್ಲಿದ್ದಾಗ ನಾವು ಯಾವೆಲ್ಲಾ ಜಾಗ್ರತೆಯನ್ನು ಪಾಲಿಸುತ್ತೇವೆಯೋ ಎಷ್ಟು ಗೌರವದಿಂದ ವರ್ತಿಸುತ್ತೇವೆಯೋ, ಎಷ್ಟು ಲವಲವಿಕೆಯಲ್ಲಿ ನಾವಿರುತ್ತೇವೆಯೋ ಅದನ್ನೆಲ್ಲಾ ಈ ಅಲ್ಲಾಹನ ಕಡೆಯಿಂದ ಆಗತವಾದಂತಹ ಪವಿತ್ರ ಅತಿಥಿಯ ಉಪಸ್ಥಿತಿಯಲ್ಲಿಯೂ ಪಾಲಿಸೋಣ.

1️ ಪತಿಗೆ ಪತ್ನಿಯೊಂದಿಗೆ ಬೊಬ್ಬೆ ಹಾಕಿ ಮಾತಾಡುವ ಅಭ್ಯಾಸ ಇದ್ದರೆ ನೆನಪಿರಲಿ ನಿಮ್ಮ ಮನೆಯಲ್ಲಿ ಅಲ್ಲಾಹನ ಕಡೆಯಿಂದ ಬಂದ ಅತಿಥಿ ಇದ್ದಾರೆ.

2️ಮಕ್ಕಳೊಂದಿಗೆ ದುಡುಕಿ ಮಾತಾಡುವ ಅಭ್ಯಾಸ ಇದ್ದರೆ ನೆನಪಿರಲಿ ನಿಮ್ಮ ಮನೆಯಲ್ಲಿ ಅತಿಥಿಯ ಉಪಸ್ಥಿತಿಯಲ್ಲಿ ಇದು ಸರಿಯಲ್ಲ.

3️ ಸುಳ್ಳು, ಪರದೂಷಣೆ, ಪರಿಹಾಸ್ಯ ಮಾಡುವ ಅಭ್ಯಾಸ ಇದ್ದರೆ ನೆನಪಿರಲಿ ರಮಝಾನ್‌ ಎಂಬ ಅತಿಥಿ ಮನೆಯಲ್ಲಿದ್ದಾರೆ.

4 ವಾಟ್ಸಾಪ್‌‌ನಲ್ಲಿ ಅನಗತ್ಯ ಚಾಟಿಂಗ್ ಅಭ್ಯಾಸ ಇದ್ದರೆ ನೆನಪಿರಲಿ ನನ್ನ ಜೊತೆ ಅಲ್ಲಾಹನು ಕಳುಹಿಸಿದ ಅತಿಥಿ ಇದ್ದಾರೆ.

5️ ಮೊಬೈಲ್‌ಲ್ಲಿ ಸೀರಿಯಲ್, ಮ್ಯಾಚ್ ನೋಡಿ ಕಾಲ ಹರಣ ಮಾಡುವವರು ನಮ್ಮ ಮನೆಯಲ್ಲಿರುವ ಅತಿಥಿಯನ್ನು ನೆನಪಿಸಿ.

ಹೀಗೆ ಪ್ರತಿಯೊಂದು ಅನವಶ್ಯಕ ಮತ್ತು ಅನರ್ಥ ಕಾರ್ಯಗಳಲ್ಲಿ ಕಳೆಯುವಾಗ, ಪುಣ್ಯ ಸಂಪಾದಿಸಿ ಸ್ವರ್ಗಕ್ಕೆ ಕರೆದೊಯ್ಯಲು ಬಂದ ಅತಿಥಿಯ ಉಪಸ್ಥಿತಿ ನೆನಪಿಗೆ ಬಂದು ಈ ಸಲದ ಈ ರಮಝಾನ್ ಜೀವನದ ‘ವಿಶಿಷ್ಟ ರಮಝಾನ್’ ನಮ್ಮ ನಿಮ್ಮೆಲ್ಲರದಾಗಲಿ. ಈ ಮೂಲಕ ಅಲ್ಲಾಹನ ಕರುಣೆಗೆ ಪಾತ್ರರಾಗೋಣ. ಯಾರು ಅವನ ಕರುಣೆಗೆ ಪಾತ್ರರಾದರೋ ಅವರು ಖಂಡಿತಾ ಪಾಪವಿಮೋಚನೆಗೆ ಪಾತ್ರನಾಗಿ ತನ್ಮೂಲಕ ನರಕ ವಿಮೋಚನೆಗೂ ಕಾರಣವಾಗುತ್ತಾನೆ. ಇಂತಹ ಭಾಗ್ಯಶಾಲಿಗಳಲ್ಲಿ ನಮ್ಮನ್ನೂ ಅಲ್ಲಾಹನು ಸೇರಿಸಲಿ.

ಸರ್ವಶಕ್ತನಾದ ಅಲ್ಲಾಹನು ಈ ತಿಂಗಳ ಪೂರ್ತಿ ಉಪವಾವನ್ನು ಆಚರಿಸಲು ನಮಗೆಲ್ಲರಿಗೂ ಆರೋಗ್ಯ ಉತ್ಸಾಹ, ಹುಮ್ಮಸ್ಸು ನೀಡಲಿ ಮತ್ತು ಅವನು ಯಾವ ಒಳಿತಿನ ಉದ್ದೇಶದೊಂದಿಗೆ ಈ ರಮಝಾನನ್ನು ನಮಗೆ ಕರುಣಿಸಿರುವನೋ ಆ ಎಲ್ಲಾ ಪುಣ್ಯಗಳಿಗೆ ನಮ್ಮೆಲ್ಲರನ್ನೂ ಪಾತ್ರಗೊಳಿಸಲಿ.