ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ – ರಾಹುಲ್ ಗಾಂಧಿ ಸಂತಾಪ

0
293

ಸನ್ಮಾರ್ಗ ವಾರ್ತೆ

ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ನಾನು ನನ್ನ ಮಾರ್ಗದರ್ಶಕನನ್ನು ಕಳೆದುಕೊಂಡಿದ್ದೇನೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕ ಸುಧಾರಣೆ ಮತ್ತು ಪ್ರಗತಿಗೆ ಅಪಾರ ಕೊಡುಗೆ ನೀಡಿದ ನಾಯಕ. “ಅವರು ಭಾರತವನ್ನು ತಮ್ಮ ಬುದ್ಧಿವಂತಿಕೆ, ಸಮಗ್ರತೆ ಮತ್ತು ಅರ್ಥಶಾಸ್ತ್ರದ ಆಳವಾದ ಜ್ಞಾನದಿಂದ ಮುನ್ನಡೆಸಿದರು. ಅವರ ಸರಳತೆಯೂ ಸೇರಿದಂತೆ, ಅವರು ದೇಶದ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದರು” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.

ಕೌರ್ ಹಾಗೂ ಕುಟುಂಬದ ಸದಸ್ಯರಿಗೆ ತಾನು ಹೃತ್ಪೂರ್ವಕ ಸಂತಾಪ ಸೂಚಿಸುತ್ತಿರುವುದಾಗಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. “ಅವರು ನಿರ್ಭಯ ನಾಯಕ ಮತ್ತು ಅಪಾರ ದಕ್ಷತೆಯ ಆರ್ಥಶಾಸ್ತ್ರಜ್ಞರಾಗಿ ದೇಶದ ಜನರ ನೆನಪಿನಲ್ಲಿ ಸದಾ ಜೀವಂತರಾಗುವರು” ಎಂದು ರಾಹುಲ್ ಗಾಂಧಿ ನುಡಿದರು.