ಹೊಸದಿಲ್ಲಿ,ಜು.5: ಭಾರತದಲ್ಲಿ ಸಂಘಪರಿವಾರದಿಂದಾಗುವ ಹತ್ಯೆಯ ವಿರುದ್ಧದ ಕುರಿತಾದ ವರದಿಯನ್ನು ವಿಶ್ವಸಂಸ್ಥೆ ಸ್ವೀಕರಿಸಿದ್ದು ಝಾರ್ಕಂಡಿನಲ್ಲಿ ತಬ್ರೀಸ್ನನ್ನು ಗುಂಪು ಹತ್ಯೆ ನಡೆಸಿದ್ದರ ವಿವರಗಳನ್ನು ಕೇಳಿದೆ. ಗುಜರಾತಿನ ಮಾನವಹಕ್ಕು ಕಾರ್ಯಕರ್ತ ಸಾಕೇತ್ ಗೋಖಲೆ ವಿಶ್ವಸಂಸ್ಥೆಗೆ ಸಲ್ಲಿಸಿದ ದೂರಿನ ಪ್ರಥಮ ಮಾಹಿತಿಯ ಆಧಾರದಲ್ಲಿ ವಿಶ್ವಸಂಸ್ಥೆ ಕ್ರಮ ಜರಗಿಸಿದೆ.
ಭಾರತದಲ್ಲಿ ಯಾವೆಲ್ಲ ರಾಜ್ಯಗಳಲ್ಲಿ ಮೋದಿ ಸರಕಾರದ ನಿಯಂತ್ರಣದಲ್ಲಿದೆ. ಮತ್ತು ದೇಶದಲ್ಲಿ ನ್ಯಾಯ ಸಿಗುವುದಿಲ್ಲ ಎಂಬ ಭಾವನೆ ಬೆಳೆಯುತ್ತಿರುವಾಗ ಇನ್ನು ಯಾರನ್ನೂ ಕಾದು ನಿಲ್ಲಲಾಗದು ಎಂದು ಗೋಖಲೆ ತಬ್ರೀಝ್ ಪ್ರಕರಣವನ್ನು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳಿಗೆ ಸಲ್ಲಿಸಿದ್ದರು. ತನಿಖೆಗೆ ಅಗತ್ಯವಾದ ವಿವರಗಳನ್ನು ಸಲ್ಲಿಸಲು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಭಾರತ ಸರಕಾರಕ್ಕೆ ಕಳುಹಿಸಿದ ಪತ್ರದಲ್ಲಿ ತಬ್ರೀಝ್ ಅನ್ಸಾರಿಯ ಹೆಸರು ಉದ್ಧರಿಸುವ ಕುರಿತು ಕುಟುಂಬದ ಅನುಮತಿಯನ್ನು ಕೇಳಿದ್ದಾರೆ.
ಸಂಘಪರಿವಾರ ಪ್ರೇರಿತ ಗುಂಪು ಹತ್ಯೆ ಮತ್ತು ಬಿಜೆಪಿ ಸರಕಾರ ಅದಕ್ಕೆ ಮೌನ ಅನುಮತಿ ನೀಡಿದ್ದನ್ನು ತಡೆಯಲು ಗೋಖಲೆ ದೂರಿನಲ್ಲಿ ಆಗ್ರಹಿಸಿದ್ದಾರೆ. ತಬ್ರೀಝ್ ಅನ್ಸಾರಿಯನ್ನು ಹೊಡೆದು ಕೊಂದ ಘಟನೆ ಸವಿಸ್ತಾರ ಪ್ರತಿಪಾದಿಸಿದ ವರದಿಯಲ್ಲಿ ಪೊಲೀಸ್ ಮತ್ತು ಸರಕಾರದ ಶಾಮೀಲುಗೊಳ್ಳುವಿಕೆಯನ್ನು ವಿವರಿಸಲಾಗಿದೆ. ಈ ವರದಿಯ ಪ್ರತಿಯನ್ನು ಜಿನೀವಾದ ವಿಶ್ವಸಂಸ್ಥೆ ಮಾನವಹಕ್ಕು ಸಂಘಟನೆಗೂ ಸಾಕೇತ್ ಗೋಖಲೆ ಕಳುಹಿಸಿಕೊಟ್ಟಿದ್ದಾರೆ.
ಕೊಲೆಗಡುಕರನ್ನು ಬೆಂಬಲಿಸಿದ ಕೇಂದ್ರ ಸರಕಾರ ಆರೋಪಿಗಳಿಗೆ ಹಾರಹಾಕಿದ್ದನ್ನು ಕೂಡ ಸಾಕೇತ್ ದೂರಿನಲ್ಲಿ ಬೆಟ್ಟು ಮಾಡಿದ್ದಾರೆ. ತಬ್ರೀಝ್ರನ್ನು ಹೊಡೆದು ಕೊಂದ ಪಪ್ಪು ಮಂಡಲ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ದೇಶದ ಕಾನೂನು ವ್ಯವಸ್ಥೆಗೆ ಬಿಜೆಪಿ ಸರಕಾರ ಮನ್ನಣೆ ನೀಡಲು ಸಿದ್ಧವಾಗದಿರುವ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ವೇದಿಕೆಯ ಮುಂದೆ ಉತ್ತರಿಸುವಂತೆ ಮಾಡುವುದಲ್ಲದೆ ಬೇರೆ ದಾರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸರಕಾರಿ ಜಮೀನು ವಶಪಡಿಸಿಕೊಂಡದ್ದನ್ನು ಪ್ರಶ್ನಿಸಿ ಸಾಕೇತ್ ಗೋಖಲೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸುಪ್ರೀಂ ಕೋರ್ಟಿನ ಪರಿಗಣನೆಯಲ್ಲಿದೆ.












