ಇವತ್ತು ಮೋದಿ, ಅಮಿತ್ ಶಾ ರಿಂದ ಅಸ್ಸಾಮ್ ಭೇಟಿ: ಸಿಎಎ ವಿರೋಧಿ ಹೋರಾಟಗಾರರನ್ನು ದಮನಿಸಿದ ಪೊಲೀಸರು

0
482

ಸನ್ಮಾರ್ಗ ವಾರ್ತೆ

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಗೃಹ ಮಂತ್ರಿ ಅಮಿತ್‍ ಶಾ ಶನಿವಾರ ಅಸ್ಸಾಂ ಭೇಟಿಗೆ ತೆರಳಲಿದ್ದು ರಾಜ್ಯದಲ್ಲಿ ನಡೆದ ಸಿಎಎ ವಿರೋಧಿ ರ್ಯಾಲಿಯ ಮೇಲೆ ಪೊಲೀಸರು ಬಲಪ್ರಯೋಗಿಸಿದ್ದಾರೆ. ವಿವಾದತ್ಮಕ ಕಾನೂನಿನ ವಿರುದ್ಧ ರಾಜ್ಯಾದ್ಯಂತ ಶುಕ್ರವಾರ ರ್ಯಾಲಿ ನಡೆದಿತ್ತು. ಆದರೆ, ಇವರ ವಿರುದ್ಧ ಕ್ರಮ ಜರಗಿಸಲಾಗಿದ್ದು ಹಲವಾರು ಮಂದಿಯನ್ನು ಬಂಧಿಸಿದ್ದಾರೆ.

ಶುಕ್ರವಾರ ತೆಸ್‍ಪುರಿಯಲ್ಲಿ ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ ನೇತೃತ್ವದಲ್ಲಿ ರ್ಯಾಲಿ ನಡೆದಿದ್ದು ಈ ವೇಳೆ ಪೊಲೀಸರು ಲಾಠಿ ಚಾರ್ಜು ಮಾಡಿದ್ದಾರೆ. ನಂತರ ಹೋರಾಟ ಹಿಂಸಾಗ್ರಸ್ತವಾಗಿದೆ. ಪೊಲೀಸರ ಕ್ರಮವನ್ನು ವಿರೋಧಿಸಿ ಎಐಎಸ್‍ಯು ಸೊನಿಟ್‍ಪುರ ಜಿಲ್ಲೆಯಲ್ಲಿ ಶನಿವಾರ ಹರತಾಳ ಘೋಷಿಸಲಾಗಿದೆ. ಮೋದಿ ಮತ್ತು ಅಮಿತ್ ಶಾ ಭೇಟಿಯನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ಅಸ್ಸಾಮ್‍ನಲ್ಲಿ ಮೂರು ದಿನಗಳ ಪ್ರತಿಭಟನೆಯನ್ನು ಆಯೋಜಿಸಿದೆ.

ಐಎಸ್‍ಯು ಕಾರ್ಯಕರ್ತರು ಸಂಘಟಿಸಿದ ರ್ಯಾಲಿಯನ್ನು ಪೊಲೀಸ್ ತಡೆಯುವುದರೊಂದಿಗೆ ಪಾರ್ಟಿಯ ಮುಖ್ಯ ಸಲಹೆಗಾರ ಸಮುಜ್ಲ್ ಭಟ್ಟಾಚಾರ್ಯ, ಅಧ್ಯಕ್ಷ ದೀಪಂಕ್ ನಾಥ್ ಸಹಿತ ನಾಯಕರು ಪೊಲೀಸರನ್ನು ಕಟುವಾಗಿ ಟೀಕಿಸಿದ್ದಾರೆ. ಶಾಂತಿ ಪೂರ್ವಕ ಪ್ರಜಾಪ್ರಭುತ್ವಪರವಾದ ರ್ಯಾಲಿಯನ್ನು ತಡೆಯಲು ಸರಕಾರ ಪೊಲೀಸರನ್ನು ನೇಮಿಸಿದೆ. ಪ್ರತಿಭಟನಾಕಾರರ ಪ್ರಜಾಪ್ರಭುತ್ವವಾದಿ ಹಕ್ಕನ್ನು ಬಲಪ್ರಯೋಗಿಸಿ ದಮನಿಸಿಲು ಬಿಜೆಪಿ ಸರಕಾರ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕೂಡ ಬರುತ್ತಾರೆ.

ಆದರೆ ಸಿಎಎ ವಿರುದ್ಧ ಪ್ರತಿಭಟನೆ ನಾವು ಬಲಪಡಿಸುತ್ತೇವೆ ಎಂದು ನಾವು ಕೇಂದ್ರಕ್ಕೆ ಮುನ್ನೆಚ್ಚರಿಕೆ ನೀಡುತ್ತೇನೆ. ಸಿಎಎ ರದ್ದುಪಡಿಸುವವರೆಗೆ ವಿಶ್ರಾಮವಿಲ್ಲ ಎಂದು ದೀಪಂಕ್ ನಾಥ್ ಹೇಳಿದರು.